ನಿನ್ನೆ ಪರೀಕ್ಷೆಯಿಂದ ಅರ್ಧಕ್ಕೆ ಎದ್ದುಹೋಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್​

| Updated By: ಸಾಧು ಶ್ರೀನಾಥ್​

Updated on: Jul 02, 2020 | 11:33 AM

ಮಂಡ್ಯ: ಕೊರೊನಾದ ಆತಂಕದ ಮಧ್ಯೆ ಧೈರ್ಯ ಮಾಡಿ SSLC ಪರೀಕ್ಷೆ ಬರೆಯಲು ಮುಂದಾಗಿರುವ ವಿದ್ಯಾರ್ಥಿಗಳಲ್ಲಿ ಇದೀಗ ಮತ್ತಷ್ಟು ಆತಂಕ ಮನೆಮಾಡಿದೆ. ಇದಕ್ಕೆ ಕಾರಣ ಪರೀಕ್ಷೆ ಬರೆಯುತ್ತಿರುವ ಹಲವಾರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿರುವುದು. ಅಂತೆಯೇ ಇಂದು ಜಿಲ್ಲೆಯ ಪಾಂಡವಪುರದ ಖಾಸಗಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ SSLC ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯ ತಂದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ ಪರೀಕ್ಷೆ ಬರೆಯುವಾಗಲೇ ಆಕೆಯನ್ನು ಕೊಠಡಿಯಿಂದ ಆರೋಗ್ಯಾಧಿಕಾರಿಗಳು ಪರೀಕ್ಷೆ ಮಧ್ಯದಲ್ಲೇ ಕರೆದೊಯ್ದಿದ್ದರು. ವಿದ್ಯಾರ್ಥಿನಿಯ ತಾಯಿ ಮತ್ತು ಸಹೋದರನಲ್ಲೂ […]

ನಿನ್ನೆ ಪರೀಕ್ಷೆಯಿಂದ ಅರ್ಧಕ್ಕೆ ಎದ್ದುಹೋಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್​
Follow us on

ಮಂಡ್ಯ: ಕೊರೊನಾದ ಆತಂಕದ ಮಧ್ಯೆ ಧೈರ್ಯ ಮಾಡಿ SSLC ಪರೀಕ್ಷೆ ಬರೆಯಲು ಮುಂದಾಗಿರುವ ವಿದ್ಯಾರ್ಥಿಗಳಲ್ಲಿ ಇದೀಗ ಮತ್ತಷ್ಟು ಆತಂಕ ಮನೆಮಾಡಿದೆ. ಇದಕ್ಕೆ ಕಾರಣ ಪರೀಕ್ಷೆ ಬರೆಯುತ್ತಿರುವ ಹಲವಾರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿರುವುದು.

ಅಂತೆಯೇ ಇಂದು ಜಿಲ್ಲೆಯ ಪಾಂಡವಪುರದ ಖಾಸಗಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ SSLC ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯ ತಂದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ ಪರೀಕ್ಷೆ ಬರೆಯುವಾಗಲೇ ಆಕೆಯನ್ನು ಕೊಠಡಿಯಿಂದ ಆರೋಗ್ಯಾಧಿಕಾರಿಗಳು ಪರೀಕ್ಷೆ ಮಧ್ಯದಲ್ಲೇ ಕರೆದೊಯ್ದಿದ್ದರು.

ವಿದ್ಯಾರ್ಥಿನಿಯ ತಾಯಿ ಮತ್ತು ಸಹೋದರನಲ್ಲೂ ಸೋಂಕು ಪತ್ತೆ
ಇದೀಗ ಆಕೆಗೂ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯಲ್ಲಿ ಇದ್ದ ಇತರೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆತಂಕ ಶುರುವಾಗಿದೆ. ಸದ್ಯಕ್ಕೆ ವಿದ್ಯಾರ್ಥಿನಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಅವರ ತಾಯಿ ಹಾಗೂ ಸಹೋದರಿನಲ್ಲೂ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.