ಬೆಳಗಾವಿ: ರಾಜಧಾನಿಗೆ ಸೀಮಿತವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಲ್ಲಲ್ಲಿ SSLC ಪರೀಕ್ಷಾ ಕೇಂದ್ರಗಳಿಗೆ ಆಗಾಗ ಸರ್ಪ್ರೈಸ್ ವಿಸಿಟ್ ಕೊಡ್ತಿದ್ದಾರೆ. ತದನಂತರ ಸಂಜೆ ವೇಳೆಗೆ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಎಲ್ಲೂ ಕಾಪಿ ಚೀಟಿಂಗ್ ಹಾಗೂ ಪರೀಕ್ಷಾ ಅಕ್ರಮಗಳು ನಡೆದಿಲ್ಲ ಎಂದು ಷರಾ ಬರೆಯುತ್ತಾರೆ. ಆದರೆ, ವಿದ್ಯಾರ್ಥಿಗಳು ರಾಜಾರೋಷವಾಗಿ ಕಾಪಿ ಮಾಡಿವುದು ಡೇ ವನ್ ನಿಂದ ರಾಜ್ಯದಲ್ಲಿ ನಡೆದಿದೆ. ತಾಜಾ ಉದಾಹರಣೆ ಇಂದು ಜಿಲ್ಲೆಯ ಗೋಕಾಕ್ ನಗರದ ವಾಲ್ಮೀಕಿ ಕ್ರೀಡಾಂಗಣ ಬಳಿ ಇರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪತ್ತೆಯಾಗಿದೆ.
ಗೋಡೆ ಹಾರಿಬಂದು ವಿದ್ಯಾರ್ಥಿಗಳಿಗೆ ಚೀಟಿ ಹಂಚಿಕೆ
ಹೌದು ಎಲ್ಲರಿಗೂ ಗೊತ್ತು ಗಣಿತ ಕೊಂಚ ಕಷ್ಟದ ವಿಷಯ. ಆದರೆ ಈ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಮಾತ್ರ ಹೇಗಾದರೂ ಮಾಡಿ ಪಾಸ್ ಆಗಲು ಚೀಟಿಯ ಮೊರೆಹೋಗಿದ್ದಾರೆ. ಅವರಿಗೆ ಸಹಾಯ ಮಾಡಲು ಕೆಲವು ಯುವಕರು ಪರೀಕ್ಷಾ ಕೇಂದ್ರದ ಹಿಂಬದಿಯ ಗೋಡೆ ಹಾರಿ ಕಟ್ಟಡದ ಮೇಲೇರಿ ಚೀಟಿ ಸಹ ನೀಡುತ್ತಿದ್ದ ದೃಶ್ಯಗಳು ಕಂಡುಬಂದವು.
ಕೊನೆಗೆ ಇದು ಗಸ್ತು ತಿರುಗುತ್ತಿದ್ದ ಪೊಲೀಸರ ಗಮನಕ್ಕೆ ಬಂದು ಕೂಡಲೇ ಅವರನ್ನು ಅಟ್ಟಾಡಿಸಿಕೊಂಡು ಓಡಿಸಿದರು. ಪೊಲೀಸರನ್ನು ಕಂಡ ಯುವಕರು ಎದ್ನೋ ಬಿದ್ನೋ ಅಂತಾ ಅಲ್ಲಿಂದ ಕಾಲ್ಕಿತ್ತರು.
Published On - 11:40 am, Sat, 27 June 20