
ಬಾಗಲಕೋಟೆ: ಇಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ನಡೆದಿದ್ದು, ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರ ವಿರುದ್ಧವೇ ಅಕ್ರಮ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತರ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಮೇಲ್ವಿಚಾರಕರ ಕೈಗೆ ಪ್ರಶ್ನೆ ಸಂಖ್ಯೆ ಹಾಕಿ ಶಿಕ್ಷಕರು ಉತ್ತರ ಬರೆದುಕೊಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕರು ಬರೆದುಕೊಟ್ಟಿರುವ ಉತ್ತರಗಳ ಚೀಟಿ ವೈರಲ್ ಆಗಿದೆ.