AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದ ಈ ಬೃಹತ್​ ಮನೆಗಿದೆ ನೂರೊಂದು ಬಾಗಿಲು!

ಧಾರವಾಡ: ಒಂದು ಮನೆ ಅಂದ್ರೆ ಒಂದೆರಡು ಬಾಗಿಲು ಇರೋದು ಸಹಜ. ಆದರೆ ಇಲ್ಲೊಂದು ಮನೆಯಲ್ಲಿ ನೂರೊಂದು ಬಾಗಿಲು ಇವೆ ಅಂದ್ರೆ ನೀವು ನಂಬಲೇಬೇಕು. ಹೌದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದೇಸಾಯಿಯವರ ವಾಡೆ ಹಲವು ವಿಶೇಷಗಳನ್ನ ಹೊಂದಿದೆ. ಈ ಮನೆಯಲ್ಲಿ ಸಿನಿಮಾ ಮಾಡಿದ್ರೆ ಅದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತೆ ಅನ್ನೋದು ಸಿನಿಮಾ ಮಂದಿಯ ಮಾತು. ಅಲ್ಲದೆ ಉತ್ತರ ಕರ್ನಾಟಕದ ಎಲ್ಲ ಮನೆಗಳಿಗಿಂತ ಈ ಮನೆ ತನ್ನ ಬಾಗಿಲುಗಳಿಂದಲೇ ಹೆಚ್ಚು ಆಕರ್ಷಣಿಯವಾಗಿದೆ. ಈ ಬೃಹತ್ ಮನೆಗಿದೆ […]

ಧಾರವಾಡದ ಈ ಬೃಹತ್​ ಮನೆಗಿದೆ ನೂರೊಂದು ಬಾಗಿಲು!
ಸಾಧು ಶ್ರೀನಾಥ್​
|

Updated on:Jun 27, 2020 | 2:00 PM

Share

ಧಾರವಾಡ: ಒಂದು ಮನೆ ಅಂದ್ರೆ ಒಂದೆರಡು ಬಾಗಿಲು ಇರೋದು ಸಹಜ. ಆದರೆ ಇಲ್ಲೊಂದು ಮನೆಯಲ್ಲಿ ನೂರೊಂದು ಬಾಗಿಲು ಇವೆ ಅಂದ್ರೆ ನೀವು ನಂಬಲೇಬೇಕು. ಹೌದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದೇಸಾಯಿಯವರ ವಾಡೆ ಹಲವು ವಿಶೇಷಗಳನ್ನ ಹೊಂದಿದೆ. ಈ ಮನೆಯಲ್ಲಿ ಸಿನಿಮಾ ಮಾಡಿದ್ರೆ ಅದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತೆ ಅನ್ನೋದು ಸಿನಿಮಾ ಮಂದಿಯ ಮಾತು. ಅಲ್ಲದೆ ಉತ್ತರ ಕರ್ನಾಟಕದ ಎಲ್ಲ ಮನೆಗಳಿಗಿಂತ ಈ ಮನೆ ತನ್ನ ಬಾಗಿಲುಗಳಿಂದಲೇ ಹೆಚ್ಚು ಆಕರ್ಷಣಿಯವಾಗಿದೆ.

ಈ ಬೃಹತ್ ಮನೆಗಿದೆ 101 ಬಾಗಿಲು ಬ್ರಿಟಿಷರು ಆಳ್ವಿಕೆ ಮುನ್ನವೇ ಉತ್ತರ ಕರ್ನಾಟಕದ ಬಹುಭಾಗವನ್ನ ಅಲ್ಲಿನ ದೇಸಾಯಿ ಮನೆತನಗಳೇ ಆಳ್ವಿಕೆ ನಡೆಸುತ್ತಿದ್ದರು. ಅದರಲ್ಲೂ ಸುತ್ತ ಮುತ್ತಲಿನ ಹಳ್ಳಿಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ದೇಸಾಯಿ ಮನೆತನವೇ ರಾಜರಾಗಿದ್ದರು. ಅಂತಹ ಮನೆತನಗಳು ಇಂದಿಗೂ ಇದ್ದು, ಅವರು ನಿರ್ಮಿಸಿದ ನೂರಾರು ವರ್ಷಗಳ ಮನೆ ಈಗಲೂ ವಾಸಸ್ಥಳಕ್ಕೆ ಯೋಗ್ಯವಾಗಿವೆ.

17ನೇ ಶತಮಾನದಲ್ಲಿ ನಿರ್ಮಾಣ ಅಣ್ಣಿಗೇರಿಯ ಈ ಬೃಹತ್ ಮನೆ 17ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಅಂದಿನಿಂದ ಇಂದಿನವರೆಗೆ ಮನೆ ಎಲ್ಲಿಯೂ ತನ್ನ ಅಸ್ತಿತ್ವವನ್ನ ಕಳೆದುಕೊಂಡಿಲ್ಲ. ಅಲ್ಲದೆ ಆಗಿನ ಕಾಲದಲ್ಲಿ ಬಳಸುತ್ತಿದ್ದ ಸುಣ್ಣದ ಗಚ್ಚು, ಕಟ್ಟಿಗೆ, ಕಲ್ಲಿನಿಂದ ಈ ಮನೆ ನಿರ್ಮಾಣವಾಗಿದೆ. ಮನೆ ಮುಂದೆ ವಿಶಾಲವಾದ ಅಂಗಳವಿದ್ದು, ಕುದುರೆ ಲಾಯ, ಎತ್ತುಗಳನ್ನ ಕಟ್ಟಲು ದೊಡ್ಡ ದೊಡ್ಡ ಕೊಟ್ಟಿಗೆ ಇದೆ.

ಇನ್ನು ಒಳಾಂಗಣ ಪ್ರವೇಶ ಮಾಡುತ್ತಿದ್ದಂತೆಯೇ ವಿಶಾಲವಾದ ಹಾಲ್, ಅಡುಗೆ ಮನೆ, 4 ರಾಜಂಗಣ, ಕಾರುಬಾರು ಕೊಠಡಿ, ವಾಡೆಯ ಯಜಮಾನರು ಪರಿವಾರದವರು ಉಳಿದುಕೊಳ್ಳಲು ರೂಮ್​ಗಳು ಸಹ ಇವೆ. ಇನ್ನು ದಾಖಲೆ ಪತ್ರಗಳನ್ನ ಇಡಲು ಕೊಠಡಿ ಇದ್ದು, ಮೇಲಿನ ಮಹಡಿಗೆ ಹೋಗಲು 4 ಕಡೆಯಿಂದ ಕಟ್ಟಿಗೆಯ ಮೆಟ್ಟಿಲುಗಳಿವೆ. ಈ ಎಲ್ಲವನ್ನ ಮುಂಭಾಗದ ದೊಡ್ಡ ಕಂಬಗಳು ಹೊತ್ತು ನಿಂತಿರೋದು ವಿಶೇಷವಾಗಿದೆ. ಒಮ್ಮೆ ಈ ಮನೆಯನ್ನ ಯಾರ ಸಹಾಯ ಇಲ್ಲದೆ ಪ್ರವೇಶ ಮಾಡಿದ್ರೆ, ಹೊರಬರೋದು ತುಂಬಾನೇ ಕಷ್ಟ. ಯಾಕಂದ್ರೆ ಮನೆಯಲ್ಲಿ ನೂರಾರು ಬಾಗಿಲುಗಳಿದ್ದು ಹೇಗೆ ಬರೋದು ಅನ್ನೋದು ಗೊಂದಲ ಆಗುತ್ತೆ.

3 ಸಿನಿಮಾಗಳಿಗೆ ಸಿಕ್ಕಿದೆ ರಾಷ್ಟ್ರ ಪ್ರಶಸ್ತಿ ಇಲ್ಲಿ ಚಿತ್ರೀಕರಣವಾದ ಮೂರು ಸಿನಿಮಾಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿವೆ. ಬೃಹತ್ ಮನೆಯಾಗಿದ್ದು, ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ, ಎರಡು ಸಿನಿಮಾಗಳನ್ನ ಇದೆ ಮನೆಯಲ್ಲಿ ಮಾಡಿದ್ದಾರೆ. ಮೊದಲು ಸಂತ ಶಿಶುನಾಳ ಶರೀಫ, ನಂತ್ರ ಸಿಂಗಾರೆವ್ವ ಸಿನಿಮಾಗಳನ್ನ ಮಾಡಿದ್ರು.‌ ನಂತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಸಿನಿಮಾಗೆ ಸಹ ರಾಷ್ಟ್ರ ಪ್ರಶಸ್ತಿ ಪಡೆದಿದೆ.

ಒಟ್ಟಾರೆ ಈ ರೀತಿಯಾಗಿ ಮನೆಯನ್ನ ಈಗ ಕಟ್ಟಬೇಕು ಅಂದ್ರೆ ಕೋಟಿಗಟ್ಟಲೆ ಹಣವನ್ನ ವ್ಯಯಿಸಬೇಕಾಗುತ್ತದೆ. ಆದ್ರೆ ಇರುವ ಮನೆಯನ್ನ ಈಗಿನ ಮೊಮ್ಮಕ್ಕಳು ತಮ್ಮ ಸ್ವಂತ ಹಣದಿಂದ ಅದರ ನವೀಕರಣ ಮಾಡುತ್ತಿದ್ದಾರೆ. ಈ ಕಾಲದಲ್ಲಿ ಈ ರೀತಿಯ ಮನೆಗಳು ಇಂದಿಗೂ ಜೀವಂತ ಇದ್ದು, ಅದು ನಮ್ಮ ಸಂಸ್ಕೃತಿಯನ್ನ ಮತ್ತು ಮನೆತನವನ್ನ ಎತ್ತಿಹಿಡಿಯುತ್ತೆ ಅನ್ನೋದು ಈಗಿನ ಮೊಮ್ಮಕ್ಕಳ ಮಾತಾಗಿದೆ. ಮನೆಯ ರಕ್ಷಣೆ ನಮ್ಮದೆಂದು ಅದರ ಉಳಿವಿಗೆ ಪಣತೊಟ್ಟಿದ್ದಾರೆ.

Published On - 1:54 pm, Sat, 27 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ