ಬೆಂಗಳೂರು: ಕೊರೊನಾ ಹರಡುವಿಕೆ ತೀವ್ರವಾಗುತ್ತಿದ್ದಂತೆ, ಅದರ ವಿರುದ್ಧದ ಹೋರಾಟವೂ ಈಗ ತೀವ್ರಗೊಳ್ಳುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಕಳವಳಗೊಂಡಿರುವ ರಾಜ್ಯ ಸರ್ಕಾರ ಈಗ ತನ್ನ ತಂತ್ರಗಾರಿಕೆಯಲ್ಲಿ ಕೆಲ ಮಟ್ಟಿನ ಬದಲಾವಣೆ ಮಾಡಿಕೊಂಡಿದೆ.
ಈ ಸಂಬಂಧ ರಾಜ್ಯದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಬೆಂಗಳೂರಿನ ಮೆಡಿಕಲ್ ಕಾಲೇಜ್‌ಗಳೊಂದಿಗೆ ಸೋಮವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಸಹಕರಿಸುವಂತೆ ಭಾಗವಹಿಸಿದ್ದ 12 ಮೆಡಿಕಲ್ ಕಾಲೇಜ್‌ಗಳಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಮಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಬೆಂಗಳೂರಿನ 12 ಮೆಡಿಕಲ್ ಕಾಲೇಜುಗಳಿಗೆ ತಮ್ಮ ತಮ್ಮ ಕಾಲೇಜ್‌ಗಳಲ್ಲಿ 200 ಬೆಡ್ ಹಾಗೂ 20 ವೆಂಟಿಲೇಟರ್‌ಗಳನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿಡಬೇಕೆಂದು ಸೂಚಿಸಿದ್ದಾರೆ.
ರಾಮಯ್ಯ ಮೆಡಿಕಲ್ ಕಾಲೇಜ್, ಸಪ್ತಗಿರಿ ಮೆಡಿಕಲ್ ಕಾಲೇಜ್, ವೈದೇಹಿ ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಸೇರಿದಂತೆ 12 ಮೆಡಿಕಲ್ ಕಾಲೇಜುಗಳಿಗೆ ಈ ಸಂಬಂಧ ತಕ್ಷಣವೇ ರೆಡಿಯಾಗಿರುವಂತೆ ಕೂಡಾ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದಾರೆ.