ಕೊರೊನಾ ವಿರುದ್ಧದ ಸಮರಕ್ಕೆ ಸಿಕ್ತು ಆನೆ ಬಲ!

ದೆಹಲಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಇಂದು ಆನೆ ಬಲ ಸಿಕ್ಕಂತಾಗಿದೆ. ಹೌದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರ ಪ್ರಾಣ ಉಳಿಸಲು ಬಳಸುವ ವೆಂಟಿಲೇಟರ್​ಗಳ ಖರೀದಿಗೆ ಪ್ರಧಾನಿ ಮೋದಿಯವರ ಪಿ.ಎಂ ಕೇರ್​ ನಿಧಿಯಿಂದ 2,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಬಿಡುಗಡೆಯಾಗಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ 50,000 ಕೃತಕ ಉಸಿರಾಟದ ಯಂತ್ರವಾದ ವೆಂಟಿಲೇಟರ್​ಗಳ​ ಖರೀದಿಗೆ ಈ ಅನುದಾನ ನೀಡಲಾಗಿದೆ. ಜೊತೆಗೆ ಈಗಾಗಲೇ 2,923 ವೆಂಟಿಲೇಟರ್​ಗಳು ತಯಾರಾಗಿವೆ. ವಿವಿಧ ರಾಜ್ಯಗಳಿಗೆ 1,340 […]

ಕೊರೊನಾ ವಿರುದ್ಧದ ಸಮರಕ್ಕೆ ಸಿಕ್ತು ಆನೆ ಬಲ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jun 23, 2020 | 1:55 PM

ದೆಹಲಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಇಂದು ಆನೆ ಬಲ ಸಿಕ್ಕಂತಾಗಿದೆ. ಹೌದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರ ಪ್ರಾಣ ಉಳಿಸಲು ಬಳಸುವ ವೆಂಟಿಲೇಟರ್​ಗಳ ಖರೀದಿಗೆ ಪ್ರಧಾನಿ ಮೋದಿಯವರ ಪಿ.ಎಂ ಕೇರ್​ ನಿಧಿಯಿಂದ 2,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಬಿಡುಗಡೆಯಾಗಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ 50,000 ಕೃತಕ ಉಸಿರಾಟದ ಯಂತ್ರವಾದ ವೆಂಟಿಲೇಟರ್​ಗಳ​ ಖರೀದಿಗೆ ಈ ಅನುದಾನ ನೀಡಲಾಗಿದೆ. ಜೊತೆಗೆ ಈಗಾಗಲೇ 2,923 ವೆಂಟಿಲೇಟರ್​ಗಳು ತಯಾರಾಗಿವೆ.

ವಿವಿಧ ರಾಜ್ಯಗಳಿಗೆ 1,340 ವೆಂಟಿಲೇಟರ್ ನೀಡಲಾಗಿದ್ದು ಮಹಾರಾಷ್ಟ್ರಗೆ 275, ದೆಹಲಿಗೆ 275, ಗುಜರಾತ್​ಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ಹಾಗೂ ರಾಜಸ್ಥಾನಕ್ಕೆ 75 ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಇದಲ್ಲದೆ ಜೂನ್ ಅಂತ್ಯದ ವೇಳೆಗೆ 14,000 ವೆಂಟಿಲೇಟರ್​ ಪೂರೈಕೆಯಾಗುವುದರ ಜೊತೆಗೆ 30 ಸಾವಿರ ವೆಂಟಿಲೇಟರ್ ಖರೀದಿಗೆ ಬಿಇಎಲ್​ಗೆ ಗುತ್ತಿಗೆ ಸಹ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Published On - 1:46 pm, Tue, 23 June 20