ಬಿರುಗಾಳಿ ಸಹಿತ ಭಾರಿ ಮಳೆ: ಇಂಡೋನೇಷ್ಯಾದಲ್ಲಿ 24 ಮಂದಿ ಸಾವು, 31 ಮಂದಿ ನಾಪತ್ತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 21, 2021 | 10:52 PM

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹಡಗುಗಳು ದಡಕ್ಕೆ ಮರಳಿದ್ದವು. ಎರಡು ಟಗ್​ ಬೋಟ್ ಮತ್ತು ಕೆಲ ಮೀನುಗಾರಿಕಾ ಹಡಗುಗಗಳು ಲಂಗರು ಹಾಕುತ್ತಿದ್ದ ವೇಳೆ ಬಿರುಗಾಳಿ ಎದ್ದು ಸಾಗರ ಪ್ರಕ್ಷುಬ್ಧವಾಗಿದೆ.

ಬಿರುಗಾಳಿ ಸಹಿತ ಭಾರಿ ಮಳೆ: ಇಂಡೋನೇಷ್ಯಾದಲ್ಲಿ 24 ಮಂದಿ ಸಾವು, 31 ಮಂದಿ ನಾಪತ್ತೆ
ಇಂಡೋನೇಷ್ಯಾದಲ್ಲಿ ಬಿರುಗಾಳಿ (ಪ್ರಾತಿನಿಧಿಕ ಚಿತ್ರ)
Follow us on

ಜಕಾರ್ತ: ಇಂಡೋನೇಷ್ಯಾದ ಸಾಂಬಾಸ್ ಜಿಲ್ಲೆಯಲ್ಲಿ ಈಚೆಗೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ 24 ಮಂದಿ ಮೃತಪಟ್ಟಿದ್ದು, 31 ಜನರು ನಾಪತ್ತೆಯಾಗಿದ್ದಾರೆ. 18 ಮೀನುಗಾರಿಕೆ ಹಡಗುಗಳಿಗೆ ಧಕ್ಕೆಯಾಗಿವೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹಡಗುಗಳು ದಡಕ್ಕೆ ಮರಳಿದ್ದವು. ಎರಡು ಟಗ್​ ಬೋಟ್ ಮತ್ತು ಕೆಲ ಮೀನುಗಾರಿಕಾ ಹಡಗುಗಗಳು ಲಂಗರು ಹಾಕುತ್ತಿದ್ದ ವೇಳೆ ಬಿರುಗಾಳಿ ಎದ್ದು ಸಾಗರ ಪ್ರಕ್ಷುಬ್ಧವಾಗಿದೆ.

‘ಮೃತರ ಸಂಖ್ಯೆ 24ಕ್ಕೆ ಏರಿದೆ. 31 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಪಶ್ಚಿಮ ಕಲಿಮಂತನ್ ಪ್ರಾಂತ್ಯದ ರಕ್ಷಣಾ ಅಧಿಕಾರಿ ಯೊಪಿ ಹರ್ಯಾದಿ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಈ ಪ್ರಾಂತ್ಯದಲ್ಲಿ ಎರಡು ದಿನಗಳ ಹಿಂದೆ ಬಿರುಗಾಳಿ ಸಹಿತ ಭಾರಿ ಮಳೆ ಅಪ್ಪಳಿಸಿತ್ತು. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಹಡಗುಗಳು ದಡಕ್ಕೆ ಬರುತ್ತಿದ್ದವು. ಆದರೆ ಅವುಗಳಲ್ಲಿದ್ದ ಜನರು ಕೆಳಗೆ ಇಳಿಯುವಷ್ಟರಲ್ಲಿ ಸಾಗರ ಪ್ರಕ್ಷುಬ್ಧವಾಗಿ ಅನಾಹುತ ಸಂಭವಿಸಿತ್ತು. ರಕ್ಷಣಾ ಸಂಸ್ಥೆಗಳು ಈವರೆಗೆ ಒಟ್ಟು 83 ಮಂದಿಯನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ದಿವೆ.

ಇನ್ನೂ ಮೂರು ದಿನಗಳವರೆಗೆ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಬುಧವಾರದಿಂದ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು, ರಕ್ಷಣಾ ಕಾರ್ಯಾಚರಣೆಗಳು ಕಠಿಣವಾಗಲಿವೆ. ಹೆಲಿಕಾಪ್ಟರ್, ವಿಮಾನ ಮತ್ತು ಹಡಗುಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

(Storm Strikes Fishing Ships In Central Indonesia 24 Killed 31 Missing)

ಇದನ್ನೂ ಓದಿ: Biodiversity day : ಬಿರುಗಾಳಿ ಎಷ್ಟೇ ಜೋರಾಗಿ ಬೀಸಿದರೂ ಅದೊಮ್ಮೆ ತಣ್ಣಗಾಗಲೇಬೇಕು!

ಇದನ್ನೂ ಓದಿ: ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ