ಕೊರೊನ ಸಮಯವನ್ನು ಬಳಸಿಕೊಂಡು ಸಂಗೀತದಲ್ಲಿ ಸಾಧನೆ.. ತಂಡ ಕಟ್ಟಿಕೊಂಡು ಹಾಡಿನ ಮೂಲಕ ಮೂಡಿ ಮಾಡ್ತಿದ್ದಾರೆ ಈ ವಿದ್ಯಾರ್ಥಿಗಳು

ನಾಡಿನೆಲ್ಲೆಡೆ ಕೊರೊನಾ ಅನ್ನೋ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳ ಜೀವನ ಡೋಲಾಯಮಾನವಾಗಿಸಿದೆ. ಆದ್ರೆ ಮೈಸೂರಿನ ವಿದ್ಯಾರ್ಥಿಗಳು ಈ ಕೊರೊನ ಸಮಯವನ್ನು ಬಳಸಿಕೊಂಡು ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ.

ಕೊರೊನ ಸಮಯವನ್ನು ಬಳಸಿಕೊಂಡು ಸಂಗೀತದಲ್ಲಿ ಸಾಧನೆ.. ತಂಡ ಕಟ್ಟಿಕೊಂಡು ಹಾಡಿನ ಮೂಲಕ ಮೂಡಿ ಮಾಡ್ತಿದ್ದಾರೆ ಈ ವಿದ್ಯಾರ್ಥಿಗಳು
ಗಾನಸುಧೆ ಹರಿಸಿದ ಅಪರ್ಯಾಪ್ತ ತಂಡ

Updated on: Mar 22, 2021 | 8:07 AM

ಮೈಸೂರು: ಇಲ್ಲಿ ಯಾರು ಹವ್ಯಾಸಿ ಗಾಯಕರಲ್ಲ. ಮೈಸೂರಿನ ವಿವಿಧ ಕಾಲೇಜುಗಳ ಪದವಿ ವಿದ್ಯಾರ್ಥಿಗಳು. ಕೊರೊನಾ ಸಂಕಷ್ಟ ಕಾಲದ ಬಿಡುವಿನ ಸಮಯದಲ್ಲಿ ಇವರು ಅಪರ್ಯಾಪ್ತ ಅನ್ನೋ ಒಂದು ಗಾಯನ ತಂಡವನ್ನು ಹುಟ್ಟು ಹಾಕಿದ್ದಾರೆ. 15 ವಿದ್ಯಾರ್ಥಿಗಳ ಈ ತಂಡದ ಸಂಗೀತ ಪ್ರತಿಭೆಗೆ ವೇದಿಕೆ ಒದಗಿಸಿದ್ದು ಮೈಸೂರು ಬುಕ್ ಕ್ಲಬ್‌ನ ಸದಸ್ಯರು.

ಮೈಸೂರಿನ ಕಲಾ ಮಂದಿರದ ಚಿಂತಕರ ಚಾವಡಿಯಲ್ಲಿ ವಿದ್ಯಾರ್ಥಿಗಳ ಗಾಯನಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಬರೋಬ್ಬರಿ ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳು ತಮ್ಮ ಗಾನಸುಧೆ ಹರಿಸಿದ್ರು. ಒಂದಲ್ಲ ಎರಡಲ್ಲ ಬರೋಬ್ಬರಿ 11 ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ ವಿದ್ಯಾರ್ಥಿಗಳು ನೆರೆದಿದ್ದವರು ನಿಬ್ಬೆರಗಾಗುವಂತೆ ಮಾಡಿದರು. ಅದರಲ್ಲೂ ದಾಸರ ಪದಗಳಿಗೆ ಎಲ್ಲರೂ ಫಿದಾ ಆದ್ರು.

ವಿದ್ಯಾರ್ಥಿಗಳ ಹಾಡಿನ ಪ್ರತಿಭೆಗೆ ನೆರೆದಿದ್ದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದರಲ್ಲೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನಮ್ಮ ಸಂಸ್ಕೃತಿ ಕಲೆಯ ಉಳಿವಿಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಕೊರೊನಾ ಸಯಮವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೆಚ್ಚಿಸಿ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ನಾಡಿನೆಲ್ಲೆಡೆ ಕೊರೊನಾ ಅನ್ನೋ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳ ಜೀವನ ಡೋಲಾಯಮಾನವಾಗಿಸಿದೆ. ಆದ್ರೆ ಮೈಸೂರಿನ ವಿದ್ಯಾರ್ಥಿಗಳು ಈ ಕೊರೊನ ಸಮಯವನ್ನು ಬಳಸಿಕೊಂಡು ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ.

ಅಪರ್ಯಾಪ್ತ ತಂಡ

ವಿದ್ಯಾರ್ಥಿಗಳ ಗಾಯನಕ್ಕೆ ಸಾಕ್ಷಿಯಾದ ಜನ

ಅಪರ್ಯಾಪ್ತ ತಂಡ

ಇದನ್ನೂ ಓದಿ: 18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ: ಎದೆಗುಂದದೆ ಎಲ್ಲರಿಗೂ ಸ್ಪೂರ್ತಿಯಾಗುವ ಪುಸ್ತಕ ಬರೆದ ವಿಶೇಷ ಚೇತನ..!