Unwanted Thoughts: ಬೇಡದ ಯೋಚನೆಗಳಿಂದ ಹೊರಬರುವುದು ಹೇಗೆ?

| Updated By: ನಯನಾ ರಾಜೀವ್

Updated on: Jul 18, 2022 | 8:30 AM

ಯೋಚನೆಯೆಂದರೆ ಹಾಗೆ ಪದೇ ಪದೇ ಒಂದೇ ವಿಷಯವು ನಿಮ್ಮನ್ನು ಕಾಡುತ್ತಿರುತ್ತದೆ. ಆದರೆ ಇಂತಹ ಬೇಡದ ಯೋಚನೆಗಳಿಂದ ಹೊರಬರದೇ ಇದ್ದರೆ ಮುಂದೊಂದು ದಿನ ಖಿನ್ನತೆಗೆ ಒಳಗಾಗಬೇಕಾಗುತ್ತದೆ.

Unwanted Thoughts: ಬೇಡದ ಯೋಚನೆಗಳಿಂದ ಹೊರಬರುವುದು ಹೇಗೆ?
Emotions
Follow us on

ಯೋಚನೆಯೆಂದರೆ ಹಾಗೆ ಪದೇ ಪದೇ ಒಂದೇ ವಿಷಯವು ನಿಮ್ಮನ್ನು ಕಾಡುತ್ತಿರುತ್ತದೆ. ಆದರೆ ಇಂತಹ ಬೇಡದ ಯೋಚನೆಗಳಿಂದ ಹೊರಬರದೇ ಇದ್ದರೆ ಮುಂದೊಂದು ದಿನ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಕೆಲವರಿಗೆ ಆ ವಿಷಯವನ್ನು ಬಿಟ್ಟು ಬೇರೆ ವಿಷಯವನ್ನು ಆಲೋಚನೆ ಮಾಡುವ ಶಕ್ತಿಯೇ ಇರುವುದಿಲ್ಲ, ಇನ್ನೂ ಕೆಲವರು ಜನರು ಒಂದು ವಿಷಯದ ಜಾಗದಲ್ಲಿ ಮತ್ತೊಂದು ವಿಷಯವನ್ನು ರಿಪ್ಲೇಸ್ ಮಾಡುವ ಮೂಲಕ ಬೇಡದ ಯೋಚನೆಗಳನ್ನು ದೂರ ಮಾಡುತ್ತಾರೆ.

ಈ ಆಲೋಚನೆಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಏನನ್ನಾದರೂ ದೀರ್ಘಕಾಲ ಯೋಚಿಸಿದರೆ, ಅದು ಅವನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅತಿಯಾಗಿ ಆಲೋಚನೆ ಮಾಡಿದಾಗ ಮೆದುಳು ಒಂದು ರೀತಿಯ ಬಲೆ ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ.

ಇದರಿಂದ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ.

ಆಲೋಚನೆಗಳು ಎನ್ನುವುದು ಒಂದು ಚಕ್ರದಂತೆ ತಿರುಗುತ್ತಾ ಇರುತ್ತದೆ. ಇದರಲ್ಲಿ ಮೊದಲಿಗೆ ನಕಾರಾತ್ಮಕ ಆಲೋಚನೆಗಳು, ಇದರ ಬಳಿಕ ಧನಾತ್ಮಕ ಆಲೋಚನೆಗಳು, ಹಿಂದಿನ ಆಲೋಚನೆಗಳು ಮತ್ತು ಭವಿಷ್ಯದ ಆಲೋಚನೆಗಳು, ಸಂತಸದ ಆಲೋಚನೆಗಳು, ಚಿಂತೆಯ ಆಲೋಚನೆಗಳು ಮತ್ತು ಹೀಗೆ ತಿರುಗುತ್ತಾ ಇರುತ್ತದೆ.

ಇಷ್ಟವಾದ ವಿಷಯಗಳ ಬಗ್ಗೆ ಹೆಚ್ಚು ಗಮನಕೊಡಿ
ಬೇಡದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ನಿಮಗೆ ಇಷ್ಟವಾದ ವಿಷಯಗಳ ಬಗ್ಗೆ ಹೆಚ್ಚು ಗಮನಕೊಡಿ.

ನಕಾರಾತ್ಮಕ ಯೋಚನೆಗಳಿಂದ ದೂರವಾಗಬಹುದೇ?
ತುಂಬಾ ಸಮಸ್ಯೆ ಉಂಟು ಮಾಡುವ ಅಥವಾ ಬೇಡದೆ ಇರುವಂತಹ ಕೆಲವೊಂದು ಆಲೋಚನೆಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದರಿಂದ ನೀವು ತುಂಬಾ ಶಾಂತಿ ಹಾಗೂ ಸಂತೋಷವನ್ನು ಗಳಿಸಬಹುದು.

ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ
ಜೀವನವೆಂಬುದು ಸುರಕ್ಷಿತವಲ್ಲ ಹಾಗೆಯೇ ಭವಿಷ್ಯವು ಹೀಗೆಯೇ ಆಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ
ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆದಾಗ ನಿಮ್ಮ ಮನಸ್ಸಿನಲ್ಲಿರುವ ಬೇಡದ ಯೋಚನೆಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ.