Depression: ಖಿನ್ನತೆಯ ಈ ಲಕ್ಷಣಗಳನ್ನು ಕಡೆಗಣಿಸಬೇಡಿ, ತುರ್ತು ಚಿಕಿತ್ಸೆ ಅಗತ್ಯವಿರಬಹುದು
ಖಿನ್ನತೆ ( Depression)ಎಂಬುದು ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ. ಇದು ಮಧುಮೇಹ, ರಕ್ತದ ಒತ್ತಡ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಕಾಯಿಲೆಯಾಗಿದೆ.
ಖಿನ್ನತೆ ( Depression)ಎಂಬುದು ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ. ಇದು ಮಧುಮೇಹ, ರಕ್ತದ ಒತ್ತಡ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಕಾಯಿಲೆಯಾಗಿದೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ನಿಮಗಿಷ್ಟವಲ್ಲದ ಸಣ್ಣಪುಟ್ಟ ವಿಚಾರಗಳು ಕೂಡ ನಿಮ್ಮನ್ನು ಖಿನ್ನತೆಗೆ ದೂಡಬಹುದು. ಯಾವುದೋ ಒಂದು ವಿಚಾರವು ಬಹುದಿನಗಳಿಂದ ನಿಮ್ಮನ್ನು ಕಾಡುತ್ತಿದ್ದರೆ ನಿಮಗೆ ಖಿನ್ನತೆ ಉಂಟಾಗಬಹುದು.
ನಿಮ್ಮ ಜೀವನದಲ್ಲಿ ಬೇಸರದ ಸಂಗತಿಗಳು ನಡೆದಾಗ ದುಃಖವಾಗುವುದು ಸಹಜ, ಆದರೆ ಅದೇ ನೋವನ್ನು ನೀವು ಎರಡು ವಾರಗಳಿಗಿಂತ ಹೆಚ್ಚು ದಿನಗಳಿಗೆ ಕೊಂಡೊಯ್ದರೆ ಅದರಿಂದ ನಿಮ್ಮ ಮಾನಸಿಕ ಸ್ಥಿತಿ ಹದಗೆಟ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.
ಒಂದೊಮ್ಮೆ ನಿಮಗೆ ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುತ್ತದೆ. ಖಿನ್ನತೆಯು ನಿಮ್ಮ ವೃತ್ತಿ, ಭಾವನೆಗಳು, ವರ್ತನೆ, ಶಿಕ್ಷಣ, ಊಟ, ನಿದ್ರೆ, ಸಂಬಂಧಗಳು ಹೀಗೆ ಎಲ್ಲದರ ಮೇಲೂ ಪರಿಣಾಮವನ್ನು ಬೀರುತ್ತದೆ.
ಖಿನ್ನತೆಯ ಲಕ್ಷಣಗಳು ಹೀಗಿರಲಿವೆ
ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು: ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಸುಸ್ತು, ಇಷ್ಟ ಪಟ್ಟು ಮಾಡುವ ಕೆಲಸಗಳಲ್ಲಿ ನಿರಾಸಕ್ತಿ, ಆತ್ಮವಿಶ್ವಾಸ ಕಳೆದುಕೊಳ್ಳುವುದು, ಖಿನ್ನತೆಯ ಪ್ರಮುಖ ಲಕ್ಷಣಗಳಲ್ಲಿ ಹೆಚ್ಚು ದುಃಖ ಅಥವಾ ಬೇಸರ, ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಕಷ್ಟ ಪಡುವುದು, ಅತಿಯಾಗಿ ತಿನ್ನುವುದು, ಅಪರಾಧಿ ಭಾವನೆ, ನಿದ್ರೆ ಬಾರದಿರುವುದು ಇವೆಲ್ಲವೂ ಸೇರಿವೆ.
ಈ ವಿಷಯಗಳು ಖಿನ್ನತೆಯನ್ನು ಉಂಟುಮಾಡಬಹುದು ಕೆಲಸ, ಕೌಟುಂಬಿಕ ಅಥವಾ ವೈವಾಹಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳು, ದೈಹಿಕ ಆರೋಗ್ಯ ಸಮಸ್ಯೆಗಳು, ಪರಿಪೂರ್ಣತೆಯ ಬಯಕೆ, ವ್ಯಕ್ತಿತ್ವದ ಚಿಂತೆ, ಮಾದಕ ವಸ್ತುಗಳ ಚಟ, ಶಾಲೆಕಾಲೇಜು ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಸ್ಪರ್ಧೆ ಇವೆಲ್ಲವೂ ಖಿನ್ನತೆಯನ್ನು ಉಂಟುಮಾಡುವ ಸಾಮಾನ್ಯ ವಿಷಯಗಳಾಗಿವೆ. ಜೀವನದಲ್ಲಿನ ಒತ್ತಡ, ಅಹಿತಕರ ಘಟನೆಗಳು ಹೀಗೆ ಹಲವು ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು.
ಓವರ್ಥಿಂಕಿಂಗ್: ಒಂದೇ ವಿಷಯಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ಕೂಡ ಖಿನ್ನತೆ ಉಂಟಾಗಬಹುದು. ಒಂದೊಮ್ಮೆ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮೂಡಿದಲ್ಲಿ ಮಾನಸಿಕ ಸಮಸ್ಯೆಗಳು ಕಾಡಲಿವೆ.
ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ: ಖಿನ್ನತೆ ಮನಸ್ಸಿಗೆ ಸಂಬಂಧಿಸಿದ್ದರಿಂದ ಜನರು ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಕೆಲವರಂತೂ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅಪಹಾಸ್ಯಕ್ಕೆ ಒಳಗಾಗಬಹುದು. ಖಿನ್ನತೆಯ ಲಕ್ಷಣಗಳಿರುವ ಜನರೊಂದಿಗೆ ಮುಕ್ತವಾಗಿ ಮಾತನಾಡಬೇಕು ಅಥವಾ ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ