Mango Leaves: ಮಾವಿನ ಎಲೆಯಲ್ಲಿದೆ ಮಧುಮೇಹ ಗುಣಪಡಿಸುವ ಶಕ್ತಿ, ಬಳಕೆ ಹೇಗೆ?

ಮಧುಮೇಹ(Diabetes)ಎಂಬುದು ಲಕ್ಷಾಂತರ ಮಂದಿಯನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹ ಇದ್ದು ಸಹಜ ಜೀವನ ನಡೆಸುವುದು ತುಂಬಾ ಕಷ್ಟಕರ ಸಂಗತಿ.

Mango Leaves: ಮಾವಿನ ಎಲೆಯಲ್ಲಿದೆ ಮಧುಮೇಹ ಗುಣಪಡಿಸುವ ಶಕ್ತಿ, ಬಳಕೆ ಹೇಗೆ?
Mango Leaves
Follow us
TV9 Web
| Updated By: ನಯನಾ ರಾಜೀವ್

Updated on: Jun 10, 2022 | 10:37 AM

ಮಧುಮೇಹ(Diabetes)ಎಂಬುದು ಲಕ್ಷಾಂತರ ಮಂದಿಯನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹ ಇದ್ದು ಸಹಜ ಜೀವನ ನಡೆಸುವುದು ತುಂಬಾ ಕಷ್ಟಕರ ಸಂಗತಿ. ನೀವು ಒಂದೊಮ್ಮೆ ಡಯೆಟ್ ಮಾಡುತ್ತಿದ್ದರೂ ಕೂಡ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಅಥವಾ ನಿಯಂತ್ರಣದಲ್ಲಿಡುವ ಆಹಾರವನ್ನು ಸೇವಿಸಿದರೆ ಒಳಿತು. ಅದರಲ್ಲಿ ಮಾವಿನ ಎಲೆ ಕೂಡಾ ಒಂದು.

ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಮಾವಿನ ಹಣ್ಣು, ಮಾವಿನ ಕಾಯಿ ಎರಡೂ ಬಳಕೆಯಲ್ಲಿದೆ. ಮಾವಿನ ಎಲೆಯು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿರುವ ವರದಿ ಪ್ರಕಾರ, ಕಳೆದ ಮೂರು ದಶಕಗಳಲ್ಲಿ ಮಧುಮೇಹ ಸಾವು ಶೇ.150 ಹೆಚ್ಚಾಗಿದೆ.

ಅಷ್ಟೇ ಅಲ್ಲ, ಮೂತ್ರಪಿಂಡ ಕಾಯಿಲೆ, ಕುರುಡುತನ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣಗೊಳ್ಳಲು ಇದು ಕಾರಣವಾಗಿದೆ. ಮಧುಮೇಹ ರೋಗಿಗಳನ್ನು ಹೊಂದಿರುವ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಭಾರತ ಆಗಿದೆ. ಕಳೆದ ಮೂರು ದಶಕಗಳೇ, ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಸುಮಾರು 150 ಪ್ರತಿಶತದಷ್ಟು ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಮಾವಿನ ಎಲೆಯ ಪ್ರಯೋಜನವೇನು? ಮಾವಿನ ಎಲೆಯುವ ಮೊದಲು ಕೆಂಪು ಬಣ್ಣದಲ್ಲಿದ್ದು, ಬೆಳೆದಂತೆ ಕ್ರಮೇಣವಾಗಿ ಹಸಿರುಬಣ್ಣಕ್ಕೆ ತಿರುಗುತ್ತದೆ. ಎಲೆಗಳಲ್ಲಿ ಫ್ಲೇವನಾಯ್ಡ್ಸ್​ ಹಾಗೂ ಫೆನಾಲ್​ ಅಂಶವಿರುತ್ತದೆ ಹಾಗೆಯೇ ಆಂಟಿಆಕ್ಸಿಡೆಂಟ್ಸ್​ ಕೂಡ ಅಡಕವಾಗಿರುತ್ತದೆ. ಮಾವಿನ ಎಲೆಗಳನ್ನು ಪೌಡರ್ ಅಥವಾ ಡಿಕಾಕ್ಷನ್ ರೀತಿ ಬಳಕೆ ಮಾಡಲಾಗುತ್ತದೆ. ಸೌತ್ ಈಸ್ಟ್​ ಏಷ್ಯಾದಲ್ಲಿ ಮಾವಿನ ಎಲೆಯನ್ನು ಫ್ರೈ ಮಾಡಿ ಅಥವಾ ಹಸಿಯಾಗಿಯೂ ತಿನ್ನುತ್ತಾರೆ.

ಮಾವಿನ ಎಲೆಯು ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ, ಹಾಗೆಯೇ ಗ್ಲೂಕೋಸ್ ವಿತರಣೆಯನ್ನು ಕೂಡ ಮಾಡುತ್ತದೆ. ಹಾಗೆಯೇ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕೂಡ ನಿಯಂತ್ರಿಸುತ್ತದೆ. ಮಾವಿನ ಎಲೆಯಲ್ಲಿ ಪೆಕ್ಟಿನ್, ವಿಟಮಿನ್ ಸಿ ಹಾಗೂ ಫೈಬರ್ ಅಂಶವಿದ್ದು, ಮಧುಮೇಹವನ್ನು ಕಡಿಮೆ ಮಾಡಲು ಹಾಗೂ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಕಾರಿ.

ಮಾವಿನ ಎಲೆ ಬಳಕೆ ಹೇಗೆ? -10-15 ಮಾವಿನ ಎಲೆಗಳನ್ನು ತೆಗೆದುಕೊಳ್ಳಿ ಅದು ಸಾಫ್ಟ್​ ಆಗುವವರೆಗೂ ಕುದಿಸಿ -ಕುದಿಸಿದ ಬಳಿಕ ಇಡೀ ರಾತ್ರಿ ಹಾಗೆಯೇ ಬಿಡಿ -ಬೆಳಗ್ಗೆ ಎದ್ದು ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ -ಮಾವಿನ ಎಲೆಯ ನೀರನ್ನು ನಿತ್ಯ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. -ನೀವು ಖಾಲಿ ಹೊಟ್ಟೆಯಲ್ಲಿ ಮಾವಿನ ಎಲೆಯನ್ನು ಹಾಗೆಯೂ ತಿನ್ನಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ