Migraine: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಈ ಆಸನಗಳನ್ನು ಟ್ರೈ ಮಾಡಿ

ಮೈಗ್ರೇನ್ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ವಿಪರೀತ ತಲೆನೋವನ್ನು ತಡೆದುಕೊಳ್ಳುವುದು ಕಷ್ಟದ ಸಂಗತಿ. ಇಡೀ ತಲೆ ನೋವು ಸಾಮಾನ್ಯವಾದದ್ದಾದರೂ ಅರ್ಧ ತಲೆ ನೋವು ತಡೆದುಕೊಳ್ಳಲಾಗದಷ್ಟು ನೋವನ್ನುಂಟುಮಾಡುತ್ತದೆ.

Migraine: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಈ ಆಸನಗಳನ್ನು ಟ್ರೈ ಮಾಡಿ
Yogasana
Follow us
TV9 Web
| Updated By: ನಯನಾ ರಾಜೀವ್

Updated on: Jun 09, 2022 | 4:16 PM

ಮೈಗ್ರೇನ್ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ವಿಪರೀತ ತಲೆನೋವನ್ನು ತಡೆದುಕೊಳ್ಳುವುದು ಕಷ್ಟದ ಸಂಗತಿ. ಇಡೀ ತಲೆ ನೋವು ಸಾಮಾನ್ಯವಾದದ್ದಾದರೂ ಅರ್ಧ ತಲೆ ನೋವು ತಡೆದುಕೊಳ್ಳಲಾಗದಷ್ಟು ನೋವನ್ನುಂಟುಮಾಡುತ್ತದೆ. ತಲೆನೋವು ಬಂದಾಕ್ಷಣ ಅದನ್ನು ಮೈಗ್ರೇನ್ ಎಂದುಕೊಂಡು ಭಯ ಪಡುವ ಅಗತ್ಯವಿಲ್ಲ, ಸಾಮಾನ್ಯ ತಲೆ ನೋವು ಹಾಗೂ ಮೈಗ್ರೇನ್​ನಿಂದ ಬರುವ ತಲೆನೋವಿಗೂ ತುಂಬಾ ವ್ಯತ್ಯಾಸವಿದೆ.

ಈ ಮೊದಲು ಎಂದೂ ಕಾಣಿಸಿಕೊಳ್ಳದ ನೋವು, ಜೊತೆಗೆ ಕೈಕಾಲಲ್ಲಿ ನೋವು ಮತ್ತು ನಿಶ್ಯಕ್ತಿ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಏಕೆಂದರೆ ಕೆಲವೊಮ್ಮೆ ತಲೆನೋವು ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯ ಸಂಕೇತವಾಗಿರುತ್ತದೆ. ಆದ್ದರಿಂದ ಪದೆ ಪದೇ ತಲೆನೋವು, ಕುತ್ತಿಗೆ ನೋವು, ವಾಕರಿಕೆ ಅಥವಾ ಕಣ್ಣು ಮಂಜಾಗುವುದು ಮೊದಲಾದ ಸಮಸ್ಯೆಗಳನ್ನು ಕಡೆಗಣಿಸಬೇಡಿ.

ಮೈಗ್ರೇನ್ ತಲೆ ನೋವಿಗೆ ಅನೇಕ ಕಾರಣವಿದೆ. ಒತ್ತಡ, ವಾತಾವರಣದಲ್ಲಿನ ಬದಲಾವಣೆ, ಉದ್ವೇಗ, ಆತಂಕ, ಆಘಾತ, ನಿದ್ರೆಯ ಕೊರತೆಯಿಂದ ಮೈಗ್ರೇನ್ ಉಂಟಾಗಬಹುದು. ಮೈಗ್ರೇನ್ ಸಮಸ್ಯೆ ಶುರುವಾದರೆ ಎರಡು ಗಂಟೆಗಳಿಂದ ಹಿಡಿದು ಎರಡು ದಿನಗಳ ಕಾಲ ನೋವು ಇರಬಲ್ಲದು. ಹಾಗೂ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತದೆ.

ಮೈಗ್ರೇನ್ ನಿವಾರಣೆಗೆ ವೈದ್ಯರು ಅಗತ್ಯ ಔಷಧಿಗಳನ್ನು ನೀಡುತ್ತಾರೆ, ಆದರೆ ಯೋಗ ಮತ್ತು ವ್ಯಾಯಾಮವು ಇದರ ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ತುಂಬಾ ವರ್ಷಗಳಿಂದ ತಲೆ ನೋವಿನ ಸಮಸ್ಯೆಯಿದ್ದು, ಅದನ್ನು ಮೈಗ್ರೇನ್ ಎಂದು ವೈದ್ಯರು ಹೇಳಿದ್ದರೆ ನೀವು ಈ ಯೋಗಗಳನ್ನು ಮಾಡುವ ಮೈಗ್ರೇನ್ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಹಸ್ತ ಪಾದಾಸನ: ಉಪಯೋಗಗಳು ಹಸ್ತಪಾದಾಸನ ಮಾಡುವುದರಿಂದ ಸ್ನಾಯುಗಳು ಸ್ಟ್ರೆಚ್ ಮಾಡಲು ಅನುಕೂಲವಾಗುವುದು -ರಕ್ತದ ಸಂಚಾರ ಸುಗಮವಾಗಲಿದೆ -ಬೆನ್ನುಹುರಿ ಹೆಚ್ಚು ಫ್ಲೆಕ್ಸಿಬಲ್​ ಆಗಿರಲಿದೆ

ಶಿಶು ಆಸನ ಪ್ರಯೋಜನಗಳು -ಬೆನ್ನಿಗೆ ಸಹಾಯವಾಗಲಿದೆ -ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲಿದೆ -ಒಂದೊಮ್ಮೆ ನೀವು ಗರ್ಭಿಣಿಯಾಗಿದ್ದರೆ ಈ ಆಸನಗಳನ್ನು ಟ್ರೈ ಮಾಡಬೇಡಿ

ಮಾರ್ಜರಿ ಆಸನದ ಉಪಯೋಗಗಳು -ಬೆನ್ನುಹುರಿ ಹೆಚ್ಚು ಫ್ಲೆಕ್ಸ್​ಬಲ್ ಆಗಲಿದೆ -ನಿಮ್ಮ ಮಣಿಕಟ್ಟು ಗಟ್ಟಿಮುಟ್ಟಾಗಲಿದೆ -ಜೀರ್ಣಕ್ರಿಯೆ ಉತ್ತಮವಾಗಲಿದೆ

ಅಧೋಮುಖ ಶ್ವಾನಾಸನದ ಉಪಯೋಗಗಳು ಕಿಬ್ಬೊಟ್ಟೆಯ ಮೇಲೆ ಮಲಗಿ ಕೈಗಳನ್ನು ನೆಲದ ಮೇಲೆ ಸರಿಸಿ ಮೇಲಕ್ಕೆ ಏಳುವುದು. ಈ ರೀತಿ ಮಾಡಿದರೆ ಮೆದುಳಿನಲ್ಲಿ ರಕ್ತ ಪರಿಚಲನೆ ಹೆಚ್ಚುತ್ತದೆ. ಇದರಿಂದ ತಲೆನೋವು ಕಡಿಮೆ ಮಾಡಬಹುದು. -ಶ್ವಾಸಕೋಶ ಉತ್ತಮವಾಗಲಿದೆ -ಎದೆಯ ಭಾಗದ ಸ್ನಾಯುಗಳು ಗಟ್ಟಿಯಾಗಲಿವೆ -ಇಡೀ ದೇಹಕ್ಕೂ ಶಕ್ತಿಯನ್ನು ಒದಗಿಸಲಿದೆ

ಸೇತುಬಂಧಾಸನ ಪ್ರಯೋಜನಗಳೇನು -ನಿಮ್ಮ ಬೆನ್ನಿಗೆ ಬಲ ನೀಡುತ್ತದೆ -ಕುತ್ತಿಗೆ, ಎದೆ, ಬೆನ್ನುಹುರಿ ಭಾಗಕ್ಕೆ ಶಕ್ತಿ ದೊರೆಯಲಿದೆ -ನೋವು, ಖಿನ್ನತೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲಿದೆ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ