22 ತಿಂಗಳ ನಂತರ ವಿಷ ಘಳಿಗೆ ಮರೆತು.. ಸುಳ್ವಾಡಿ ಮಾರಮ್ಮ ದೇವಾಲಯ ಭಕ್ತರಿಗೆ ಮುಕ್ತ ಮುಕ್ತ
ಚಾಮರಾಜನಗರ: 2018ರಲ್ಲಿ ವಿಷ ಪ್ರಾಶನ ಪ್ರಕರಣದಿಂದ ರಾಜ್ಯದಾದ್ಯಂತ ಸುದ್ದಿಯಲ್ಲಿದ್ದ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಸರಿಸುಮಾರು 22 ತಿಂಗಳ ನಂತರ ಜಿಲ್ಲಾಡಳಿತ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. 2018ರ ಡಿಸೆಂಬರ್ 14 ರಂದು ಮುಚ್ಚಲಾಗಿದ್ದ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರಸಿದ್ದ ಪರಿಂಣಾಮವಾಗಿ 17 ಮಂದಿ ಸಾವನಪ್ಪಿದ್ದರು. ಪ್ರಕರಣದ ನಾಲ್ವರು ಆರೋಪಿಗಳು ಸದ್ಯ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ದೇವಾಲಯದ ಟ್ರಸ್ಟ್ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು. […]
ಚಾಮರಾಜನಗರ: 2018ರಲ್ಲಿ ವಿಷ ಪ್ರಾಶನ ಪ್ರಕರಣದಿಂದ ರಾಜ್ಯದಾದ್ಯಂತ ಸುದ್ದಿಯಲ್ಲಿದ್ದ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಸರಿಸುಮಾರು 22 ತಿಂಗಳ ನಂತರ ಜಿಲ್ಲಾಡಳಿತ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
2018ರ ಡಿಸೆಂಬರ್ 14 ರಂದು ಮುಚ್ಚಲಾಗಿದ್ದ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರಸಿದ್ದ ಪರಿಂಣಾಮವಾಗಿ 17 ಮಂದಿ ಸಾವನಪ್ಪಿದ್ದರು. ಪ್ರಕರಣದ ನಾಲ್ವರು ಆರೋಪಿಗಳು ಸದ್ಯ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ದೇವಾಲಯದ ಟ್ರಸ್ಟ್ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು.
ಪ್ರಕರಣದಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ ಕೂಡ ಭಾಗಿಯಾಗಿದ್ದು ದುರಂತದ ನಂತ್ರ ದೇವಾಲಯವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದೀಗ, ಕಳೆದ ಮೂರು ದಿನಗಳಿಂದ ನಡೆದ ಹೋಮ ಹವನಗಳ ನಂತರ ಇಂದಿನಿಂದ ಸಾರ್ವಜನಿಕರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತಿದೆ.’