
ಅದು ಹಾಗಿರಲಿ, ರೈನಾ ಯಾಕೆ ಹಾಗೆ ವಾಪಸ್ಸು ಬಂದರೆನ್ನುವುದು ಮಾತ್ರ ಇನ್ನೂ ನಿಗೂಢವಾಗೇ ಉಳಿದಿದೆ.
ಮೊದಲು, ಪಂಜಾಬಿನ ಪಠಾಣಕೋಟ್ ಜೆಲ್ಲೆಯಲ್ಲಿ ವಾಸವಿದ್ದ ಅವರ ಸಂಬಂಧಿಯೊಬ್ಬರನ್ನು ದರೋಡೆಕೋರರು ಆಗಸ್ಟ 19ರ ಮಧ್ಯರಾತ್ರಿ ಕೊಂದು ಅದೇ ಕುಟುಂಬದ ಇತರ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿದ ಸುದ್ದಿ ಕೇಳಿ ರೈನಾ ಭಾರತಕ್ಕೆ ಧಾವಿಸಿದರೆಂದು ವರದಿಯಾಯಿತು.
ಅದಾದ ನಂತರ, ರೈನಾ, ಕೊವಿಡ್ ಸೋಂಕಿನ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದರು ಮತ್ತು ತಮ್ಮ ಅವಶ್ಯಕತೆ ಸಿಎಸ್ಕೆಗಿಂತ ಕುಟುಂಬಕ್ಕೆ ಜಾಸ್ತಿಯಿದೆ ಅಂತ ಭಾವಿಸಿ ಪತ್ನಿ ಮತ್ತು ಮಕ್ಕಳೊಂದಿಗಿರಲು ಮನೆಗೆ ಹಿಂದಿರುಗಿದರು ಎಂದು ವರದಿಯಾಯಿತು. ಜನ ಅದನ್ನೂ ನಂಬಿದರು. ಅದನ್ನು ಪುಷ್ಟೀಕರಿಸುವ ಹಾಗೆ ರೈನಾ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗಿನ ಚಿತ್ರಗಳನ್ನು ಶೇರ್ ಮಾಡಿದರು.
ಅದರೆ, ಶ್ರೀನಿವಾಸನ್ ಈಗ ತಾನು ಹಾಗೆ ಹೇಳಲೇ ಇಲ್ಲ ಎಂಬಂತೆ ಆಡುತ್ತಿದ್ದಾರೆ.
‘‘ಸಿಎಸ್ಕೆ ತಂಡಕ್ಕೆ ಸುರೇಶ್ ರೈನಾ ನೀಡಿರುವ ಕೊಡುಗೆ ಅಪ್ರತಿಮ ಹಾಗೂ ಅದ್ವಿತೀಯವಾದದ್ದು. ಆದರೆ ಜನ ಅವರ ಬಗ್ಗೆ ಏನೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ರೈನಾ ಅನುಭವಿಸುತ್ತಿರುವ ಸಂಕಟವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಜನ ಮಾಡಬೇಕು,’’ಎಂದಿದ್ದಾರೆ.
ತಾನು ವಾಪಸ್ಸು ಬಂದ ನಂತರ ಇಷ್ಟೆಲ್ಲ ನಡೆಯುತ್ತಿದ್ದರೂ ರೈನಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮುಗುಮ್ಮಾಗಿದ್ದಾರೆ. ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆಯೂ ರೈನಾಗೆ ಅಸಮಾಧಾನವಿದೆಯಂತೆ. ಯಾವುದು ಸತ್ಯ, ಯಾವುದು ಸುಳ್ಳು ಅಂತ ರೈನಾ ಬಾಯಿಬಿಟ್ಟಾಗ ಮಾತ್ರ ಗೊತ್ತಾಗಲಿದೆ.