ಸರ್ಕಾರಿ ಜಮೀನಲ್ಲಿ ಕಲ್ಯಾಣ ಮಂಟಪ! ಆನೇಕಲ್ ತಹಶೀಲ್ದಾರ್ ಏನು ಮಾಡಿದರು?

| Updated By: ಸಾಧು ಶ್ರೀನಾಥ್​

Updated on: Aug 27, 2020 | 11:37 AM

ಆನೇಕಲ್: ಸರ್ಕಾರಿ ಜಮೀನೊಂದರಲ್ಲಿ ಅಕ್ರಮವಾಗಿ ಕಲ್ಯಾಮ ಮಂಟಪವೊಂದು ನಿರ್ಮಾಣವಾಗುತ್ತಿದ್ದು, ಅದನ್ನು ನಿಲ್ಲಿಸುವಂತೆ ಇದೀಗ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರು ನಗರ‌ ಜಿಲ್ಲೆ ಆನೇಕಲ್ ತಾಲ್ಲೂಕಿನ ಸುರಜಕ್ಕನಹಳ್ಳಿ ಬಳಿಯ ಗ್ರಾಮ ಪಂಚಾಯಿತಿಗೆ ಸೇರುವ ಸರ್ವೆ ನಂ 5,6,7 ರಲ್ಲಿ ಅಕ್ರಮ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಆನೇಕಲ್​ನಿಂದ ಇಂಡ್ಲವಾಡಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಈ ಕಲ್ಯಾಣ ಮಂಟಪವಿದೆ. ಸರ್ವೆ ನಂಬರ್ ಸರ್ಕಾರದ ಭೂಮಿಗೆ ಸೇರುತ್ತದೆ ಎಂದು ಹೇಳಲಾಗುತ್ತಿದ್ದು ಅದರಲ್ಲಿ ಹೊನ್ನಕಳಾಶಪುರ ಎಂಬ ಗ್ರಾಮಕ್ಕೆ ಸಾಗುವ‌ ರಸ್ತೆ ನಿರ್ಮಾಣವಾಗಬೇಕಿತ್ತು. ಆದ್ರೆ ಇದೀಗ […]

ಸರ್ಕಾರಿ ಜಮೀನಲ್ಲಿ ಕಲ್ಯಾಣ ಮಂಟಪ! ಆನೇಕಲ್ ತಹಶೀಲ್ದಾರ್ ಏನು ಮಾಡಿದರು?
Follow us on

ಆನೇಕಲ್: ಸರ್ಕಾರಿ ಜಮೀನೊಂದರಲ್ಲಿ ಅಕ್ರಮವಾಗಿ ಕಲ್ಯಾಮ ಮಂಟಪವೊಂದು ನಿರ್ಮಾಣವಾಗುತ್ತಿದ್ದು, ಅದನ್ನು ನಿಲ್ಲಿಸುವಂತೆ ಇದೀಗ ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರು ನಗರ‌ ಜಿಲ್ಲೆ ಆನೇಕಲ್ ತಾಲ್ಲೂಕಿನ ಸುರಜಕ್ಕನಹಳ್ಳಿ ಬಳಿಯ ಗ್ರಾಮ ಪಂಚಾಯಿತಿಗೆ ಸೇರುವ ಸರ್ವೆ ನಂ 5,6,7 ರಲ್ಲಿ ಅಕ್ರಮ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಆನೇಕಲ್​ನಿಂದ ಇಂಡ್ಲವಾಡಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಈ ಕಲ್ಯಾಣ ಮಂಟಪವಿದೆ. ಸರ್ವೆ ನಂಬರ್ ಸರ್ಕಾರದ ಭೂಮಿಗೆ ಸೇರುತ್ತದೆ ಎಂದು ಹೇಳಲಾಗುತ್ತಿದ್ದು ಅದರಲ್ಲಿ ಹೊನ್ನಕಳಾಶಪುರ ಎಂಬ ಗ್ರಾಮಕ್ಕೆ ಸಾಗುವ‌ ರಸ್ತೆ ನಿರ್ಮಾಣವಾಗಬೇಕಿತ್ತು.

ಆದ್ರೆ ಇದೀಗ ಆ ರಸ್ತೆ ಬದಲು ಅದೇ ಜಾಗದಲ್ಲಿ ಖಾಸಗಿ ವ್ಯಕ್ತಿಗೆ ಸೇರುವ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಲು ಆನೇಕಲ್ ತಹಶೀಲ್ದಾರ್ ಮಹಾದೇವಯ್ಯ ಸೂಚನೆ ನೀಡಿದ್ದಾರೆ. ಸರ್ಕಾರದಿಂದ ಸರ್ವೆ ಆಗುವವರೆಗೂ ಕೆಲಸ ಕಾಮಗಾರಿ ನಡೆಸದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.