ಯಾರ ಕೋಟೆ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯಗೆ ತನ್ವೀರ್ ಟಾಂಗ್
ಮೈಸೂರು ಮೇಯರ್ ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಟ್ಟಿರುವುದಕ್ಕೆ ಶಾಸಕ ತನ್ವೀರ್ ಸೇಠ್ ಪಾತ್ರವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ತನ್ವೀರ್ ಸೇಠ್ಗೆ ನೋಟಿಸ್ ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಆಗ್ರಹಿಸಿದ್ದರು.
ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿ ಮಾತನಾಡಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಯಾರ ಕೋಟೆ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಪಕ್ಷ ನನಗೆ ನೀಡಿದ ಕೆಲಸವನ್ನು ಮಾಡಿದ್ದೇನೆ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಅನಿಸುತ್ತಿದೆ. ಈ ಘಟನೆಯನ್ನು ಹೇಗೆ ಗ್ರಹಿಸುತ್ತಾರೋ ನನಗೆ ಗೊತ್ತಿಲ್ಲ. ಒಂದಂತೂ ಸತ್ಯ, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ತನ್ವೀರ್ ಸೇಠ್ ಮೇಲಿನ ಸಿಟ್ಟು ಸಿದ್ದರಾಮಯ್ಯಗೆ ಸದ್ಯಕ್ಕಂತೂ ಕಡಿಮೆಯಾಗುವ ಹಾಗೆ ಕಾಣುತ್ತಿಲ್ಲ. ಮೇಯರ್ ಸ್ಥಾನ ಪಕ್ಷದ ಕೈ ಜಾರಿದ್ದಕ್ಕೆ ರೊಚ್ಚಿಗೆದ್ದಿರೋ ಸಿದ್ದು ಮೇಲಿಂದ ಮೇಲೆ ಸೇಠ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನನ್ನ ವಿರುದ್ಧ ನನ್ನ ಕ್ಷೇತ್ರದಲ್ಲೇ ಸೇಠ್ ರಾಜಕೀಯ ಮೇಲಾಟವಾಡುತ್ತಿದ್ದಾರೆ. ಅವರು ಹೀಗೆ ಮಾಡಿದ್ರೂ ನಾನು ಸುಮ್ಮನೆ ಇರಬೇಕಾ ಅಂತಾ ತನ್ವೀರ್ ಸೇಠ್ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಮೈಸೂರು ಮೇಯರ್ ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಟ್ಟಿರುವುದಕ್ಕೆ ಶಾಸಕ ತನ್ವೀರ್ ಸೇಠ್ ಪಾತ್ರವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ತನ್ವೀರ್ ಸೇಠ್ಗೆ ನೋಟಿಸ್ ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಆಗ್ರಹಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ತನ್ವೀರ್ ಸೇಠ್ ಭೇಟಿ ಮಾಡುತ್ತಾರೆ. ಈ ಕುರಿತು ಮಹತ್ತರವಾದ ಮಾತುಕತೆ ನಡೆಯುತ್ತದೆ. ಲಿಖಿತ ರೂಪದಲ್ಲಿ ಮೈಸೂರ ಮೇಯರ್ ಚುನಾವಣೆ ಘಟನೆಯ ಬಗ್ಗೆ ವರದಿ ಸಿದ್ಧಪಡಿಸಿರುವ ಸೇಠ್ ಡಿ.ಕೆ.ಶಿವಕುಮಾರ್ಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ
ತನ್ವೀರ್ ಸೇಠ್ ವಿರುದ್ಧ ಸಿಡಿದ ಸಿದ್ದರಾಮಯ್ಯ.. ಡಿ.ಕೆ.ಶಿವಕುಮಾರ್ ಜೊತೆ ತನ್ವೀರ್ ಸೇಠ್ ಮಹತ್ವದ ಮೀಟಿಂಗ್
CM ಯಡಿಯೂರಪ್ಪ AK 47 ನಿಂದ ಬೆದರಿಸಿದರೂ ನಾಳೆ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ -ತನ್ವೀರ್