ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಗ್ರಾಮದಲ್ಲಿ ಈಗ ಭಾರಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಇಪ್ಪತ್ತು ವರ್ಷಗಳ ನಂತರ ತುಂಬಿದೆ ಕೆರೆ.
ಹೌದು 20 ವರ್ಷಗಳ ನಂತರ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಕೆರೆ ತುಂಬಿದೆ. ಅಷ್ಟೇ ಅಲ್ಲ ಕೆರೆಯ ಕೋಡಿ ಕೂಡಾ ತುಂಬಿ ಹರಿದಿದೆ. ಇದು ಗ್ರಾಮದ ಜನರಲ್ಲಿ ಇನ್ನಿಲ್ಲದ ಸಂತಸ ತರಿಸಿದೆ. ಹೀಗಾಗಿ ಗ್ರಾಮದ ಜನರೆಲ್ಲಾ ಸೇರಿ ತುಂಬಿದ ಕೆರೆಗೆ ಬಾಗೀನ ಅರ್ಪಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಮಾಜಿ ಸಚಿವ ರಮೇಶ್ ಕುಮಾರ್ ಮತ್ತು ಸ್ಥಳೀಯ ಶಾಶಕ ಶರತ್ ಬಚ್ಚೇಗೌಡರನ್ನು ಅತಿಥಿಗಳನ್ನಾಗಿ ಕರೆಸಿದ್ದಾರೆ. ಅವರ ಮೂಲಕ ತುಂಬಿದ ಕೆರೆಗೆ ಬಾಗೀನ ಅರ್ಪಿಸಿದ್ದಾರೆ.