ರಾಜಾಜಿನಗರದ ಕಾಲೇಜಿನಲ್ಲಿ ಶಿಕ್ಷಕನ ರೌದ್ರಾವತಾರ! ವಿಡಿಯೋ ವೈರಲ್

|

Updated on: Oct 18, 2019 | 4:27 PM

ಬೆಂಗಳೂರು: ಗುರುಭ್ಯೋ ನಮಃ ಎಂದು ಪೂಜಿಸುವ ನಾಡಿನಲ್ಲಿ ಗುರುವೊಬ್ಬರು ವಿದ್ಯಾರ್ಥಿಗೆ ಬ್ಯಾಗಿನಿಂದ ಹೊಡೆದು, ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ನಡೆದಿದೆ. ಇದನ್ನು ಕಾಲೇಜಿನಲ್ಲಿದ್ದ ಇತರೆ ವಿದ್ಯಾರ್ಥಿಗಳು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ರಾಜಾಜಿನಗರದ ಬಸವೇಶ್ವರ ಕಾಲೇಜ್​ನಲ್ಲಿ ಮೂರು ದಿನಗಳ ಹಿಂದೆ ಈ ಪ್ರಸಂಗ ನಡೆದಿದೆ. ರವಿ ಎಂಬ ವಿದ್ಯಾರ್ಥಿ ಸ್ಟಿಕ್ ಮುರಿದು, ಕೀಟಲೆ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಆತನನ್ನು ಶಿಕ್ಷಕ ಹರೀಶ್ ಮನಬಂದಂತೆ ಥಳಿಸಿದ್ದಾನೆ. ರವಿಯನ್ನು ಶಿಕ್ಷಕ ಮೊದಲು ಬ್ಯಾಗಿನಿಂದ ಹೊಡೆದು, ಮತ್ತೊಬ್ಬನನ್ನು ಅಟ್ಟಾಡಿಸಿಕೊಂಡು ಹೊಡೆದಿರೋದು […]

ರಾಜಾಜಿನಗರದ ಕಾಲೇಜಿನಲ್ಲಿ ಶಿಕ್ಷಕನ ರೌದ್ರಾವತಾರ! ವಿಡಿಯೋ ವೈರಲ್
Follow us on

ಬೆಂಗಳೂರು: ಗುರುಭ್ಯೋ ನಮಃ ಎಂದು ಪೂಜಿಸುವ ನಾಡಿನಲ್ಲಿ ಗುರುವೊಬ್ಬರು ವಿದ್ಯಾರ್ಥಿಗೆ ಬ್ಯಾಗಿನಿಂದ ಹೊಡೆದು, ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ನಡೆದಿದೆ. ಇದನ್ನು ಕಾಲೇಜಿನಲ್ಲಿದ್ದ ಇತರೆ ವಿದ್ಯಾರ್ಥಿಗಳು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ರಾಜಾಜಿನಗರದ ಬಸವೇಶ್ವರ ಕಾಲೇಜ್​ನಲ್ಲಿ ಮೂರು ದಿನಗಳ ಹಿಂದೆ ಈ ಪ್ರಸಂಗ ನಡೆದಿದೆ.

ರವಿ ಎಂಬ ವಿದ್ಯಾರ್ಥಿ ಸ್ಟಿಕ್ ಮುರಿದು, ಕೀಟಲೆ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಆತನನ್ನು ಶಿಕ್ಷಕ ಹರೀಶ್ ಮನಬಂದಂತೆ ಥಳಿಸಿದ್ದಾನೆ. ರವಿಯನ್ನು ಶಿಕ್ಷಕ ಮೊದಲು ಬ್ಯಾಗಿನಿಂದ ಹೊಡೆದು, ಮತ್ತೊಬ್ಬನನ್ನು ಅಟ್ಟಾಡಿಸಿಕೊಂಡು ಹೊಡೆದಿರೋದು ಸೆರೆಯಾಗಿದೆ. ಸದರಿ ವಿಡಿಯೋವನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಘಟನೆಯ ಬಳಿಕ ಸದರಿ ವಿದ್ಯಾರ್ಥಿ ಮತ್ತು ಶಿಕ್ಷಕ ಕಾಲೇಜಿನತ್ತ ಬಂದಿಲ್ಲ ಎಂದು ತಿಳಿದುಬಂದಿದೆ.

Published On - 2:14 pm, Fri, 18 October 19