ಮನೆ ದೇವರ ದೇಗುಲ ಪ್ರವೇಶಕ್ಕೂ ಮುನ್ನ ಯಡಿಯೂರಪ್ಪ ಪಾದ ತೊಳೆದ ಬೆಂಬಲಿಗ
ತುಮಕೂರು: ಕುಣಿಗಲ್ ತಾಲೂಕಿನ ಎಡೆಯೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಬೆಂಬಲಿಗ ಬಿಎಸ್ವೈ ಪಾದ ತೊಳೆದ ಘಟನೆ ನಡೆದಿದೆ. ಮನೆ ದೇವರು ಎಡೆಯೂರಿನ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಲು ಯಡಿಯೂರಪ್ಪ ಎಡಿಯೂರಿಗೆ ತೆರಳಿದ್ದರು. ದೇಗುಲ ಪ್ರವೇಶಕ್ಕೂ ಮುನ್ನ ಬೆಂಬಲಿಗರೊಬ್ಬರು ಬಿಎಸ್ವೈ ಅವರ ಪಾದ ತೊಳೆದಿದ್ದಾರೆ. ಪಾದ ತೊಳೆದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ದೇಗುಲ ಪ್ರವೇಶಿಸಿದ್ದಾರೆ. ಮೈತ್ರಾದೇವಿ ಯಡಿಯೂರಪ್ಪ ಸಮುದಾಯ ಭವನಕ್ಕೆ ಶಿಲಾನ್ಯಾಸ: ಇಂದು ತಮ್ಮ ಪತ್ನಿಯ ಹೆಸರಲ್ಲಿ ನಿರ್ಮಿಸಲಿರುವ ‘ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯಭವನ’ಕ್ಕೆ ಶಿಲಾನ್ಯಾಸ, ದೇವಸ್ಥಾನದ […]
ತುಮಕೂರು: ಕುಣಿಗಲ್ ತಾಲೂಕಿನ ಎಡೆಯೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಬೆಂಬಲಿಗ ಬಿಎಸ್ವೈ ಪಾದ ತೊಳೆದ ಘಟನೆ ನಡೆದಿದೆ.
ಮನೆ ದೇವರು ಎಡೆಯೂರಿನ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಲು ಯಡಿಯೂರಪ್ಪ ಎಡಿಯೂರಿಗೆ ತೆರಳಿದ್ದರು. ದೇಗುಲ ಪ್ರವೇಶಕ್ಕೂ ಮುನ್ನ ಬೆಂಬಲಿಗರೊಬ್ಬರು ಬಿಎಸ್ವೈ ಅವರ ಪಾದ ತೊಳೆದಿದ್ದಾರೆ. ಪಾದ ತೊಳೆದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ದೇಗುಲ ಪ್ರವೇಶಿಸಿದ್ದಾರೆ.
ಮೈತ್ರಾದೇವಿ ಯಡಿಯೂರಪ್ಪ ಸಮುದಾಯ ಭವನಕ್ಕೆ ಶಿಲಾನ್ಯಾಸ: ಇಂದು ತಮ್ಮ ಪತ್ನಿಯ ಹೆಸರಲ್ಲಿ ನಿರ್ಮಿಸಲಿರುವ ‘ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯಭವನ’ಕ್ಕೆ ಶಿಲಾನ್ಯಾಸ, ದೇವಸ್ಥಾನದ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಿಎಸ್ವೈ ಚಾಲನೆ ನೀಡಲಿದ್ದಾರೆ.
Published On - 12:46 pm, Fri, 18 October 19