ದುಡ್ಡು ಕೊಟ್ಟೋರು ಯಾರಾದ್ರು ಬಂದು ಹೇಳ್ತಾರಾ: ಹಳ್ಳಿಹಕ್ಕಿಗೆ ಕುಟುಕಿದ HDK
ಮೈಸೂರು: ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಸಂಬಂಧಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ಹಳ್ಳಿಹಕ್ಕಿ’ಯನ್ನು ಕುಟುಕಿದ್ದಾರೆ. ವಿಶ್ವಾನಾಥ್ ಏನು? ಅವರ ಮುಖವಾಡ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಸಾ.ರಾ.ಮಹೇಶ್ಗೆ ಮೊದಲೇ ಹೇಳಿದ್ದೆ. ವಿಶ್ವನಾಥ್ ಬುದ್ಧಿ ಗೊತ್ತಿದ್ದೂ ಯಾಕಪ್ಪ ಹೋಗ್ತೀಯ ಅಂತ ಹೇಳಿದ್ದೆ. ಈಗ ಗೊತ್ತಿರೋ ಸತ್ಯಕ್ಕೆ ಆಣೆ ಪ್ರಮಾಣ ಬೇಕಿತ್ತಾ? ದುಡ್ಡು ಕೊಟ್ಟೋರು ಯಾರಾದ್ರು ಬಂದು ಹೇಳ್ತಾರಾ? ಇದಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಮೈಸೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ […]
ಮೈಸೂರು: ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಸಂಬಂಧಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ಹಳ್ಳಿಹಕ್ಕಿ’ಯನ್ನು ಕುಟುಕಿದ್ದಾರೆ.
ವಿಶ್ವಾನಾಥ್ ಏನು? ಅವರ ಮುಖವಾಡ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಸಾ.ರಾ.ಮಹೇಶ್ಗೆ ಮೊದಲೇ ಹೇಳಿದ್ದೆ. ವಿಶ್ವನಾಥ್ ಬುದ್ಧಿ ಗೊತ್ತಿದ್ದೂ ಯಾಕಪ್ಪ ಹೋಗ್ತೀಯ ಅಂತ ಹೇಳಿದ್ದೆ. ಈಗ ಗೊತ್ತಿರೋ ಸತ್ಯಕ್ಕೆ ಆಣೆ ಪ್ರಮಾಣ ಬೇಕಿತ್ತಾ? ದುಡ್ಡು ಕೊಟ್ಟೋರು ಯಾರಾದ್ರು ಬಂದು ಹೇಳ್ತಾರಾ? ಇದಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಮೈಸೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಬಿಜೆಪಿಯವರು 2008ರಲ್ಲಿ ಯಾವ ರೀತಿ ಆಪರೇಷನ್ ಮಾಡಿದ್ರು ಅಂತ ಗೊತ್ತಿದೆ. ಈಗ ಸರ್ಕಾರ ಬಿಳಿಸೋಕೆ ಯಾವ ರೀತಿ ಆಪರೇಷನ್ ಮಾಡಿದ್ರು ಅನ್ನೋದೂ ಗೊತ್ತಿದೆ. ಇದಕ್ಕೆ ಬೆಟ್ಟಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೂಟ ಹೊಡೆದು ಕೂರಲ್ಲ, ಅಧಿಕಾರ ಬಿಟ್ಟುಕೊಡಲು ಸಿದ್ಧ: ನನ್ನ ಮೇಲೆ ನನ್ನ ಶಾಸಕರಿಗೆ, ಪರಿಷತ್ ಸದಸ್ಯರಿಗೆ ನಂಬಿಕೆ ಇಲ್ಲದಿದ್ದರೆ ಬೇರೆ ನಾಯಕರನ್ನ ಆಯ್ಕೆ ಮಾಡಿಕೊಳ್ಳಲಿ. ನಾನು ಅಧಿಕಾರ ಬಿಟ್ಟು ಕೊಡಲು ಸಿದ್ಧನಿದ್ದೇನೆ ಎಂದರು. ಹೆಚ್.ಡಿ.ದೇವೇಗೌಡರು ಏಕೆ ಸಭೆ ಕರೆದಿದ್ದಾರೆ ಗೊತ್ತಿಲ್ಲ. ಅವರನ್ನ ವಿಶ್ವಾಸದಿಂದ ನಡೆಸಿಕೊಳ್ಳುವರನ್ನ ಆರಿಸಿಕೊಳ್ಳಲಿ. ಆದ್ರೆ ನಾನು ಗೂಟ ಹೊಡೆದು ಕೂರುವುದಿಲ್ಲ, ಅಧಿಕಾರ ಬೇಕಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರಿಗೂ ಅದನ್ನೇ ಹೇಳಿದ್ದೇನೆ. 13 ವರ್ಷದಿಂದ ಇದೆಲ್ಲವನ್ನೂ ನಾನು ನೋಡಿದ್ದೇನೆ. ನನ್ನ ಆತ್ಮಕ್ಕೆ ನಾನು ಉತ್ತರ ಕೊಟ್ಟುಕೊಂಡರೇ ಸಾಕು, ಇನ್ನೊಬ್ಬರನ್ನ ಮೆಚ್ಚಿಸಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಲವರಿಗೆ ವೈಯಕ್ತಿಕ ಆಸೆ ಇರುತ್ತೆ, ಏನೂ ಮಾಡಲಾಗಲ್ಲ, ಹೊರಟ್ಟಿ ಸಚಿವರಾದಾಗ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಬಸವರಾಜ ಹೊರಟ್ಟಿ ಸಚಿವರಾಗಲು ನನ್ನ ಪಾತ್ರ ಇದೆ. ಈಗ ಬಸವರಾಜ ಹೊರಟ್ಟಿ ಅವರು ಮಾತನಾಡುತ್ತಾರೆ ಎಂದು ಮೈಸೂರಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Published On - 2:26 pm, Fri, 18 October 19