‘ಜಾತ್ರೆ ಕೋಣ’ ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ […]

'ಜಾತ್ರೆ ಕೋಣ' ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್
Follow us
ಸಾಧು ಶ್ರೀನಾಥ್​
|

Updated on:Oct 18, 2019 | 1:20 PM

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ.

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ ಬಾರಿ ಎಲ್ಲರ ಮುಂದೆಯೂ ಹೇಳಿದ್ದಾನೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈಗ ರಮೇಶ್​ ಕಾಂಗ್ರೆಸ್​ಗೆ ಬರಲ್ಲ, ಮುಂದೆ ಬರಬಹುದು. ಸದ್ಯಕ್ಕೆ ಸಾಲ ತೀರಿಸಬೇಕು, ದುಡ್ಡು ಮಾಡಲು 3-4 ವರ್ಷ ಆಗುತ್ತೆ. ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ದುಡ್ಡು ಮಾಡೋದೆ ರಮೇಶ್ ಜಾರಕಿಹೊಳಿ‌ ಕೆಲಸ. ಬೇರೆಯವರು ಸೇವೆ‌ ಮಾಡಲು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ರಾಜಕೀಯ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.

ಜಾತ್ರೆ ಕೋಣನಂತಾಗಿದೆ ರಮೇಶನ ಪರಿಸ್ಥಿತಿ: ಜಾತ್ರೆಯಲ್ಲಿ ಕೋಣ ಕಡಿಯೋಕ್ಕೆ ಅದನ್ನು ನಾಲ್ಕಾರು ದಿನಗಳ ಕಾಲ ಸಜ್ಜಾಗಿಸುತ್ತಾರೆ. ಅದು ವೀಕ್ ಆಗ್ಲಿ ಅಂತಾ ಅದಕ್ಕೆ ಸುಣ್ಣದ ನೀರು ಕುಡಿಸುತ್ತಾರೆ. ಇಲ್ಲೂ ಅಷ್ಟೇ ರಮೇಶನಿಗೆ ಸುಣ್ಣದ ನೀರು ಕುಡಿಸುತ್ತಿದ್ದಾರೆ. ಅವನನ್ನು ವೀಕ್ ಮಾಡುತ್ತಿದ್ದಾರೆ ಎಂದೂ ಸತೀಶ್ ಇದೇ ಸಂದರ್ಭದಲ್ಲಿ ಹೇಳಿದರು.

Published On - 1:09 pm, Fri, 18 October 19

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್