AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೌನ ಮುರಿದು ‘ಆರ್ಥಿಕ’ ವಾಗ್ಯುದ್ಧಕ್ಕೆ ಮುಂದಾದ ಕಾಂಗ್ರೆಸ್​!

ಭಾರತದ ಆರ್ಥಿಕ ಬೆಳವಣಿಗೆ ಕುಂಠಿತವಾಗ್ತಿದೆ, ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳು ಆರಂಭ ಆದ ಬೆನ್ನಲ್ಲೇ ವಿಪಕ್ಷಗಳು ತಿರುಗಿಬಿದ್ದಿವೆ. ಮಹಾರಾಷ್ಟ್ರ ಹಾಗೂ ಹರಿಯಾಣ ಎಲೆಕ್ಷನ್​ಗೂ ಇದೇ ವಿಚಾರ ಅಜೆಂಡಾ ಆಗಿದೆ. ಇದಕ್ಕೆಲ್ಲಾ ಉತ್ತರಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಈಗ ಎನ್​ಡಿಎಗೆ ಮಾಜಿ ಪಿಎಂ ಮನಮೋಹನ್ ಸಿಂಗ್ ಟಾಂಗ್ ಕೊಟ್ಟಿದ್ದು, ಭಾರತವನ್ನ 5 ಟ್ರಿಲಿಯನ್ ಆರ್ಥಿಕತೆ ರಾಷ್ಟ್ರವನ್ನಾಗಿಸೋದು ಅಸಾಧ್ಯ ಎಂದಿದ್ದಾರೆ. ಡಬಲ್‌ ಎಂಜಿನ್‌ ಮಾದರಿ ಜಾಹೀರಾತು ವಿಫಲ: ಮಹಾರಾಷ್ಟ್ರ ವಿಧಾನಸಭಾ […]

ಮೌನ ಮುರಿದು ‘ಆರ್ಥಿಕ’ ವಾಗ್ಯುದ್ಧಕ್ಕೆ ಮುಂದಾದ ಕಾಂಗ್ರೆಸ್​!
ಸಾಧು ಶ್ರೀನಾಥ್​
|

Updated on:Oct 18, 2019 | 11:04 AM

Share

ಭಾರತದ ಆರ್ಥಿಕ ಬೆಳವಣಿಗೆ ಕುಂಠಿತವಾಗ್ತಿದೆ, ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳು ಆರಂಭ ಆದ ಬೆನ್ನಲ್ಲೇ ವಿಪಕ್ಷಗಳು ತಿರುಗಿಬಿದ್ದಿವೆ. ಮಹಾರಾಷ್ಟ್ರ ಹಾಗೂ ಹರಿಯಾಣ ಎಲೆಕ್ಷನ್​ಗೂ ಇದೇ ವಿಚಾರ ಅಜೆಂಡಾ ಆಗಿದೆ. ಇದಕ್ಕೆಲ್ಲಾ ಉತ್ತರಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಈಗ ಎನ್​ಡಿಎಗೆ ಮಾಜಿ ಪಿಎಂ ಮನಮೋಹನ್ ಸಿಂಗ್ ಟಾಂಗ್ ಕೊಟ್ಟಿದ್ದು, ಭಾರತವನ್ನ 5 ಟ್ರಿಲಿಯನ್ ಆರ್ಥಿಕತೆ ರಾಷ್ಟ್ರವನ್ನಾಗಿಸೋದು ಅಸಾಧ್ಯ ಎಂದಿದ್ದಾರೆ.

ಡಬಲ್‌ ಎಂಜಿನ್‌ ಮಾದರಿ ಜಾಹೀರಾತು ವಿಫಲ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಪರ ಪ್ರಚಾರ ಅಖಾಡ ಪ್ರವೇಶಿಸಿರುವ ಮಾಜಿ ಪಿಎಂ ಮನಮೋಹನ್ ಸಿಂಗ್ ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಬೇಕು ಎಂಬ ಬಿಜೆಪಿಯ ಡಬಲ್‌ ಎಂಜಿನ್‌ ಮಾದರಿ ಜಾಹೀರಾತು ವಿಫಲವಾಗಿದೆ ಅಂತಾ ಗುಡುಗಿದ್ದಾರೆ. ಅಲ್ಲದೆ ಪಿಎಂಸಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ತೊಂದರೆಗೆ ಒಳಗಾಗಿರುವ 16 ಲಕ್ಷ ಜನರ ಕುಂದು ಕೊರತೆ ಪರಿಹರಿಸಬೇಕಿದೆ ಎಂದಿದ್ದಾರೆ.

2024ರ ವೇಳೆಗೆ 5 ಟ್ರಿಲಿಯನ್‌ ಆರ್ಥಿಕತೆ ಅಸಾಧ್ಯ: 2024ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ತಲುಪುವುದು ಸಾಧ್ಯವಿಲ್ಲ ಅಂತಾ ಮನಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಲವಾದ ಕಾರಣಗಳನ್ನ ನೀಡಿರುವ ಮನಮೋಹನ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ದರ ಶೇಕಡ 6.1 ತಲುಪಲಿದೆ ಅಂತಾ ಐಎಂಎಫ್ ಹೇಳಿದೆ. ಅಭಿವೃದ್ಧಿ ದರ ವರ್ಷದಿಂದ ವರ್ಷಕ್ಕೆ ಕುಸೀತಿರೋದ್ರಿಂದ 2024 ರ ವೇಳೆಗೆ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್‌ ಗುರಿ ತಲುಪುವ ಭರವಸೆ ಇಲ್ಲ ಎಂದಿದ್ದಾರೆ. ಅಲ್ಲದೆ 5 ಟ್ರಿಲಿಯನ್ ಗುರಿ ತಲುಪಲು ಶೇಕಡ 10ರಿಂದ 12ರ ದರದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published On - 10:17 am, Fri, 18 October 19