ಮದುವೆ ಸಮಾರಂಭ ಮುಗಿಸಿ ಬರುವಾಗ ಕಾಲುವೆಗೆ ಬಿದ್ದ ಕಾರು, 6 ಮಂದಿ ನಾಪತ್ತೆ
ಹೈದ್ರಾಬಾದ್: ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಚಾಕಿರಾಲ ಬಳಿ ನಾಗಾರ್ಜುನ ಸಾಗರ ಎಡದಂಡೆ ಕಾಲುವೆಗೆ ಕಾರು ಬಿದ್ದು 6 ಜನ ನೀರುಪಾಲಾಗಿರುವ ಘಟನೆ ನಡೆದಿದೆ. ತಡರಾತ್ರಿ ಭಾರಿ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಬಿದ್ದಿದೆ. ಅತಿ ವೇಗವೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿದ್ದ ಸಿಕಿಂದ್ರಾಬಾದ್ ಮೂಲದ ಅಬ್ದುಲ್(45), ರಾಜೇಶ(29), ಜಾನ್ಸನ್(33), ಸಂತೋಷ(23), ನರೇಶ(35) ಮತ್ತು ಪವನ್ ಕುಮಾರ (26) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್ ತಂಡ, ಸ್ಥಳೀಯ ಪೊಲೀಸರಿಂದ […]
ಹೈದ್ರಾಬಾದ್: ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಚಾಕಿರಾಲ ಬಳಿ ನಾಗಾರ್ಜುನ ಸಾಗರ ಎಡದಂಡೆ ಕಾಲುವೆಗೆ ಕಾರು ಬಿದ್ದು 6 ಜನ ನೀರುಪಾಲಾಗಿರುವ ಘಟನೆ ನಡೆದಿದೆ.
ತಡರಾತ್ರಿ ಭಾರಿ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಬಿದ್ದಿದೆ. ಅತಿ ವೇಗವೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿದ್ದ ಸಿಕಿಂದ್ರಾಬಾದ್ ಮೂಲದ ಅಬ್ದುಲ್(45), ರಾಜೇಶ(29), ಜಾನ್ಸನ್(33), ಸಂತೋಷ(23), ನರೇಶ(35) ಮತ್ತು ಪವನ್ ಕುಮಾರ (26) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್ ತಂಡ, ಸ್ಥಳೀಯ ಪೊಲೀಸರಿಂದ ರಕ್ಷಣಾ ಕಾರ್ಯಾ ನಡೆಯುತ್ತಿದೆ.
Published On - 9:08 am, Sat, 19 October 19