ಬಳ್ಳಾರಿ: ಈಗ ಎಲ್ಲೆಡೆ ಕೊರೊನಾ ಹೆಮ್ಮಾರಿ ಭೀತಿ. ಹೀಗಾಗಿ ರಾಜ್ಯ ಸರ್ಕಾರ ಇನ್ನೂ ಶಾಲಾ-ಕಾಲೇಜುಗಳನ್ನ ಆರಂಭಿಸಿಲ್ಲ. ಬದಲಿಗೆ ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ವಿನೂತನ ರೀತಿಯಲ್ಲಿ ಬೋಧನೆ ಶುರು ಮಾಡಿದ್ದಾರೆ. ಆ ಮೂಲಕ ಕರ್ಚಿಗನೂರು ಗ್ರಾಮಸ್ಥರ ವಿಶೇಷ ಗಮನ ಸೆಳೆದಿದ್ದಾರೆ.
ಕರ್ಚಿಗನೂರು ಸರ್ಕಾರಿ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಾಘವೇಂದ್ರ, ಮಹಾಮಾರಿ ಕೊರೊನಾ ಎಫೆಕ್ಟ್ ನಿಂದಾಗಿ ಎಲ್ಲ ಶಾಲೆಗಳು ಬಂದ್ ಅಗಿರೋದರಿಂದ ಮಕ್ಕಳು ಬಿಂದಾಸ್ ಅಗಿ ಓಡಾಡಿಕೊಂಡಿದ್ದಾರೆ. ಇದನ್ನರಿತ ಮುಖ್ಯ ಶಿಕ್ಷಕ ರಾಘವೇಂದ್ರ ನೇತ್ರತ್ವದಲ್ಲಿ ಶಿಕ್ಷಕರು ಹಳ್ಳಿಗೆ ತೆರಳಿ ನಾಲ್ಕೈದು ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಬೋಧನೆ ಮಾಡುತ್ತಿದ್ದಾರೆ.
ಪಾಠ ಹೇಳುವುದಷ್ಟೆ ಅಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕೂ ಮುಂಚೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಅಲ್ಲದೆ ಮಾಸ್ಕ್ ಧರಿಸಿಕೊಂಡ್ರೆ ಮಾತ್ರ ಪಾಠ ಹೇಳಿ ಕೋಡೋದಾಗಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪಾಠ ಬೋಧನೆ ಮಾಡುತ್ತಾರೆ. ಶಿಕ್ಷಕರ ಈ ಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ವಿದ್ಯಾರ್ಥಿಗಳಿಗೆ ಪಾಠದ ಜೊತೆ ಜೊತೆಗೆ ಮಹಾಮಾರಿ ಕೊರೊನಾ ಜಾಗ್ರತೆ ಮೂಡಿಸುವುದು ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯ ಬಾರದು ಎಂದು ಸ್ವ ಇಚ್ಚೆಯಿಂದ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಭೋಧನೆ ಮಾಡುವುದು. ಮರು ದಿನ ಪುನಾರಾರ್ವತನೆ ಮಕ್ಕಳಿಂದ ಮಾಡಿಸಲಾಗುತ್ತದೆ ಅಂತಾ ಪ್ರಭಾರಿ ಮುಖ್ಯ ಶಿಕ್ಷಕ ರಾಘವೇಂದ್ರ ಹೇಳುತ್ತಾರೆ.
Published On - 7:06 pm, Tue, 28 July 20