ಸುಧಾರಾಣಿ ದೂರು ಗಂಭೀರವಾದದ್ದು: ಶ್ರೀರಾಮುಲು
ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕವಾಗಿ ಮಾತಾಡುವುದನ್ನು ತುಂಬಾ ಕಡಿಮೆ ಮಾಡಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು, ಮಂಗಳವಾರದಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾದ ನಂತರ ವರದಿಗಾರರೊಂದಿಗೆ ಮಾತಿಗಿಳಿದರು. ಬೆಂಗಳೂರು ನಗರದ 8 ಕೊವಿಡ್ ವಲಯಗಳ ಮಾಹಿತಿ ಬೇಕಾಗಿತ್ತು ಮತ್ತು ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ಜನರನ್ನು ಸುಲಿಯುತ್ತಿವೆ, ಅವುಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸಲು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾಗಿದ್ದೆ ಎಂದು ಸಚಿವರು ಹೇಳಿದರು. ಕಿಡ್ನಿಸ್ಟೋನ್ ತೊಂದರೆಯಿಂದ […]
ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕವಾಗಿ ಮಾತಾಡುವುದನ್ನು ತುಂಬಾ ಕಡಿಮೆ ಮಾಡಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು, ಮಂಗಳವಾರದಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾದ ನಂತರ ವರದಿಗಾರರೊಂದಿಗೆ ಮಾತಿಗಿಳಿದರು.
ಬೆಂಗಳೂರು ನಗರದ 8 ಕೊವಿಡ್ ವಲಯಗಳ ಮಾಹಿತಿ ಬೇಕಾಗಿತ್ತು ಮತ್ತು ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ಜನರನ್ನು ಸುಲಿಯುತ್ತಿವೆ, ಅವುಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸಲು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾಗಿದ್ದೆ ಎಂದು ಸಚಿವರು ಹೇಳಿದರು.
ಕಿಡ್ನಿಸ್ಟೋನ್ ತೊಂದರೆಯಿಂದ ಬಳಲುತ್ತಿದ್ದ ಚಿತ್ರನಟಿ ಸುಧಾರಾಣಿ ಆವರ ಸಹೋದರನ ಮಗಳಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ಪ್ರಮಾದವೆಸಗಿರುವ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು. ಖಾಸಗಿ ಆಸ್ಪತ್ರೆಯವರು ಯಾರನ್ನೂ ವಾಪಸ್ಸು ಕಳಿಸುವಂತಿಲ್ಲ, ಹಾಗೆ ಮಾಡಿದ್ದೇಯಾದಲ್ಲಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಎಚ್ಚರಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಅದನ್ನೆಲ್ಲಾ ಪಕ್ಷದ ಹೈಕಮಾಂಡ್, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದರು.
Published On - 7:40 pm, Tue, 28 July 20