ಕೊರೊನಾ ಮಾರಿಗೆ ರಾಜ್ಯದಲ್ಲಿಂದು ಒಂದೇ ದಿನ 102 ಜನ ಸಾವು!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಾರಿಯ ರುದ್ರ ನರ್ತನ ಮುಂದುವರಿದಿದೆ. ಕೊರೊನಾ ಹೆಮ್ಮಾರಿಗೆ ರಾಜ್ಯದಲ್ಲಿ ಇಂದು ಒಂದೇ ದಿನ 102 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 40 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಇಂದು 5,536 ಜನರು ಹೊಸದಾಗಿ ಕೊರೊನಾದಿಂದ ಸೋಂಕಿತರಾಗಿದ್ದಾರೆ. ಹಾಗೇನೇ ಬೆಂಗಳೂರಿನಲ್ಲಿ 1,898 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾ ಪೀಡಿತರಾಗಿರುವವರ ಸಂಖ್ಯೆ 1,07,001ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ 48,821ಕ್ಕೇರಿದೆ. ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಇದುವರೆಗೆ 2,055 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ […]
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಾರಿಯ ರುದ್ರ ನರ್ತನ ಮುಂದುವರಿದಿದೆ. ಕೊರೊನಾ ಹೆಮ್ಮಾರಿಗೆ ರಾಜ್ಯದಲ್ಲಿ ಇಂದು ಒಂದೇ ದಿನ 102 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 40 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 5,536 ಜನರು ಹೊಸದಾಗಿ ಕೊರೊನಾದಿಂದ ಸೋಂಕಿತರಾಗಿದ್ದಾರೆ. ಹಾಗೇನೇ ಬೆಂಗಳೂರಿನಲ್ಲಿ 1,898 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾ ಪೀಡಿತರಾಗಿರುವವರ ಸಂಖ್ಯೆ 1,07,001ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ 48,821ಕ್ಕೇರಿದೆ.
ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಇದುವರೆಗೆ 2,055 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಈ ಸಂಖ್ಯೆ 957ಕ್ಕೇರಿದೆ. ಇದೇ ರೀತಿ ಸೋಂಕಿತರ ಪೈಕಿ 40,504 ಜನರು ಕೊರಾನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇನೆ 64,434 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Published On - 7:46 pm, Tue, 28 July 20