ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಪಾಲಿ ಚಿತ್ರಮಂದಿರ ಕುಸಿತ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಪಾಲಿ ಚಿತ್ರಮಂದಿರ ಕುಸಿತ

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಪಾಲಿ ಚಿತ್ರಮಂದಿರ ಕುಸಿಬಿದ್ದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಪಾಲಿ ಚಿತ್ರ ಮಂದಿರವನ್ನು ಕೆಡವಿ ಮತ್ತೆ ಕಟ್ಟಲಾಗುತ್ತಿತ್ತು. ಕಟ್ಟಡ ಕುಸಿತಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಒಟ್ಟು ಎರಡು ಕಟ್ಟಡಗಳು ಕುಸಿತಗೊಂಡಿವೆ ಎನ್ನಲಾಗುತ್ತಿದೆ. ಈಗಾಗಲೇ ಅಪಾಯದ ಅಂಚಿನಲ್ಲಿದ್ದ ಈ ಎರಡು ಕಟ್ಟಡಗಳಲ್ಲಿ ಒಂದನ್ನು ಬಿಬಿಎಂಪಿ ಈ ಮೊದಲೇ ಖಾಲಿ ಮಾಡಿಸಿತ್ತು. ಈಗ ಎರಡೂ ಕಟ್ಟಡಗಳು ಕುಸಿದು ಬಿದ್ದಿವೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಪ್ರಖ್ಯಾತ ಕಪಾಲಿ ಚಿತ್ರಮಂದಿರವನ್ನು ಕೆಡವಿ ಮರು ನಿರ್ಮಾಣ ಮಾಡಲಾಗುತ್ತಿತ್ತು. ಈಗ […]

Guru

| Edited By:

Jul 30, 2020 | 4:50 PM

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಪಾಲಿ ಚಿತ್ರಮಂದಿರ ಕುಸಿಬಿದ್ದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಪಾಲಿ ಚಿತ್ರ ಮಂದಿರವನ್ನು ಕೆಡವಿ ಮತ್ತೆ ಕಟ್ಟಲಾಗುತ್ತಿತ್ತು. ಕಟ್ಟಡ ಕುಸಿತಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಒಟ್ಟು ಎರಡು ಕಟ್ಟಡಗಳು ಕುಸಿತಗೊಂಡಿವೆ ಎನ್ನಲಾಗುತ್ತಿದೆ. ಈಗಾಗಲೇ ಅಪಾಯದ ಅಂಚಿನಲ್ಲಿದ್ದ ಈ ಎರಡು ಕಟ್ಟಡಗಳಲ್ಲಿ ಒಂದನ್ನು ಬಿಬಿಎಂಪಿ ಈ ಮೊದಲೇ ಖಾಲಿ ಮಾಡಿಸಿತ್ತು. ಈಗ ಎರಡೂ ಕಟ್ಟಡಗಳು ಕುಸಿದು ಬಿದ್ದಿವೆ ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದೆ ಪ್ರಖ್ಯಾತ ಕಪಾಲಿ ಚಿತ್ರಮಂದಿರವನ್ನು ಕೆಡವಿ ಮರು ನಿರ್ಮಾಣ ಮಾಡಲಾಗುತ್ತಿತ್ತು. ಈಗ ನಿರ್ಮಾಣ ಹಂತದಲ್ಲಿಯೇ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭಿವಿಸದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada