ಕಿಲೋ ಮೀಟರ್ ದೂರ ಸಾಗಿ, ಕಾಡಿನಂಚಿನಲ್ಲಿ ಬಡವರಿಗೆ ದಿನಸಿ ವಿತರಣೆ

|

Updated on: May 01, 2020 | 12:54 PM

ದಕ್ಷಿಣ ಕನ್ನಡ: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಲವಾರು ಸಂಘ ಸಂಸ್ಥೆಗಳು ಮತ್ತು ಜನ ಸಾಮಾನ್ಯರೂ ಸಹಾಯ ಹಸ್ತ ಚಾಚಿದ್ದಾರೆ. ನಗರದಲ್ಲಿ ವಾಸ ಮಾಡುತ್ತಿದ್ದ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬಡವರನ್ನು ಗುರುತಿಸಿ ಜನರು ಸಹಾಯ ಮಾಡಿದ್ದಾರೆ. ಅದ್ರೆ ಜನರ ನಡುವಿನಿಂದ ದೂರ ಉಳಿದಿರುವ ಆದಿವಾಸಿ ಕುಟುಂಬಗಳು ಮತ್ತು ಕಾಡಿನ ತಪ್ಪಲಲ್ಲಿ ವಾಸವಾಗಿರುವ ಬಡಜನರಿಗೆ ಈ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು […]

ಕಿಲೋ ಮೀಟರ್ ದೂರ ಸಾಗಿ, ಕಾಡಿನಂಚಿನಲ್ಲಿ ಬಡವರಿಗೆ ದಿನಸಿ ವಿತರಣೆ
Follow us on

ದಕ್ಷಿಣ ಕನ್ನಡ: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಲವಾರು ಸಂಘ ಸಂಸ್ಥೆಗಳು ಮತ್ತು ಜನ ಸಾಮಾನ್ಯರೂ ಸಹಾಯ ಹಸ್ತ ಚಾಚಿದ್ದಾರೆ. ನಗರದಲ್ಲಿ ವಾಸ ಮಾಡುತ್ತಿದ್ದ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬಡವರನ್ನು ಗುರುತಿಸಿ ಜನರು ಸಹಾಯ ಮಾಡಿದ್ದಾರೆ.

ಅದ್ರೆ ಜನರ ನಡುವಿನಿಂದ ದೂರ ಉಳಿದಿರುವ ಆದಿವಾಸಿ ಕುಟುಂಬಗಳು ಮತ್ತು ಕಾಡಿನ ತಪ್ಪಲಲ್ಲಿ ವಾಸವಾಗಿರುವ ಬಡಜನರಿಗೆ ಈ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಟೀಂ ನರೇಂದ್ರ ಟ್ರಸ್ಟ್ ಅನ್ನೋ ಸಂಸ್ಥೆ ಈ ಕೆಲಸವನ್ನು ಮಾಡಿದೆ.

ಕಾಡಿನಂಚಿನಲ್ಲಿ ಇರುವ ಬಡ ಜನರನ್ನು ಗುರುತಿಸಿ ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಅವರಿಗೆ ದಿನಸಿ ಕಿಟ್ ವಿತರಣೆ ಮಾಡಿದೆ. ಇಂತಹ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸಂಸ್ಥೆ ಈಗಾಗಲೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದೆ.

Published On - 11:59 am, Fri, 1 May 20