ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಸದ್ಯ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾದ 5 ಆಟಗಾರರನ್ನು ಐಸೋಲೇಷನ್ನಲ್ಲಿ ಇಡಲಾಗಿತ್ತು. ಜೊತೆಗೆ, ಇವರು ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ನಲ್ಲಿ ಆಡುವುದಿಲ್ಲ ಎನ್ನುವ ವದಂತಿ ಕೂಡ ಹಬ್ಬಿತ್ತು. ಇದೀಗ, ಇದಕ್ಕೆ BCCI ಸ್ಪಷ್ಟನೆ ನೀಡಿದೆ. ಐಸೋಲೇಷನ್ಗೆ ಒಳಗಾಗಿರುವ ಆಟಗಾರರು ಸೇರಿ ತಂಡ ಎಲ್ಲಾ ಸದಸ್ಯರು ನಾಳೆ ಸಿಡ್ನಿಗೆ ಪ್ರಯಾಣ ಬೆಳೆಸಲಿದ್ದಾರಂತೆ.
ರೋಹಿತ್ ಶರ್ಮಾ, ಶುಭ್ ಮನ್ ಗಿಲ್, ರಿಷಬ್ ಪಂತ್, ನವದೀಪ್ ಸೈನಿ ಹಾಗೂ ಪೃಥ್ವಿ ಷಾ ಹೋಟೆಲ್ ಒಂದಕ್ಕೆ ತೆರಳಿದ್ದರು. ಇದರ ಫೋಟೋವನ್ನು ಫ್ಯಾನ್ ಓರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಕೂಡ ತಮ್ಮಿಚ್ಛೆಯಂತೆ ವರದಿ ಪ್ರಕಟ ಮಾಡಿದ್ದವು.
ಭಾರತ ಆಟಗಾರರು ಯಾವುದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿಲ್ಲ. ಹೀಗಾಗಿ, ಈ 5 ಆಟಗಾರ ಮೇಲೆ ಯಾವುದೆ ನಿರ್ಬಂಧ ಇರುವುದಿಲ್ಲ. ಅವರು ಕೂಡ ತಂಡದ ಜೊತೆ ಸಿಡ್ನಿಗೆ ತೆರಳುತ್ತಾರೆ. ಅಂದು ಹೊರಗೆ ಮಳೆ ಬರುತ್ತಿದ್ದದರಿಂದ ಆಟಗಾರರು ಹೋಟೆಲ್ ಒಳಗೆ ಹೋಗಿದ್ದರು ಎಂದು ಹೆಸರು ಹೇಳಲು ಇಚ್ಛಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ, BCCI ಅಧಿಕಾರಿಗಳು ನೀಡಿರುವ ಮಾಹಿತಿ ಟೀಂ ಇಂಡಿಯಾದ ಆಟಗಾರರಿಗೆ ಖುಷಿ ತಂದುಕೊಟ್ಟಿದೆ.
‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ