ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ಭೀತಿ ನಡುವೆಯೇ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ 3 ದಿನಗಳಿಂದ ಮೂರು ಪ್ರಮುಖ ದೇಗುಲಗಳನ್ನು ಕಳ್ಳರು ದೋಚಿದ್ದಾರೆ.
ಕೆ.ಆರ್.ನಗರದ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇಗುಲದ ಲಿಂಗದ ಮೇಲಿನ ತಾಮ್ರದ 1 ಧಾರಾ ಪಾತ್ರೆ, ಮಿನಾಕ್ಷಮ್ಮ ದೇವರ 1.5 ಅಡಿ ಎತ್ತರದ ತ್ರಿಶೂಲ ಮತ್ತು ಬೆಳ್ಳಿಯ ವಸ್ತು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 3 ದಿನದಲ್ಲಿ ಮೂರು ಪ್ರಮುಖ ದೇಗುಲಗಳಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗೆ ಚುಂಚನಕಟ್ಟೆ ಶ್ರೀರಾಮ ದೇಗುಲದಲ್ಲಿ ಕಳ್ಳತನ ನಡೆದಿತ್ತು. ಭೇರ್ಯದ ದೊಡ್ಡಮ್ಮ ಕರಿಯಮ್ಮ ದೇಗುಲದಲ್ಲೂ ಖದೀಮರು ತಮ್ಮ ಕೈಚಳಕ ತೋರಿಸಿದ್ದರು. ಸದ್ಯ ಕಳ್ಳತ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
Published On - 10:11 am, Sun, 26 July 20