ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಗರದ ಹೈ ಫೈ ಏರಿಯಾಗಳಲ್ಲೂ ನಾಯಿ ಕಾಟ ಅತಿಯಾಗಿದೆ. ಇಲ್ಲೊಂದು ನಾಯಿ ಸುಮಾರು 10ಜನರ ಮೇಲೆ ದಾಳಿ ನಡೆಸಿರುವ ಘಟನೆ ಕೋರಮಂಗಲದ 4ನೇ ಬ್ಲಾಕ್ನಲ್ಲಿ ನಡೆದಿದೆ. ಕೋರಮಂಗಲದ 4ನೇ ಬ್ಲಾಕ್ನಲ್ಲಿ ಬಂದೇ ಬಂದು ನಾಯಿ ಸುಮಾರು 10 ಜನರಿಗೆ ಕಚ್ಚಿದೆ. ಇದರಿಂದ ಏರಿಯಾ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಮನೆಯಿಂದ ಆಚೆ ಆಟವಾಡಲೂ ಸಹ ಬಿಡದಂತಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಬಂದೇ ನಾಯಿ 10 ಜನರಿಗೆ ಕಚ್ಚಿರುವುದರಿಂದ ಆ ನಾಯಿಗೆ ಹುಚ್ಚು ಇದೆಯಾ ಎಂಬ ಅನುಮಾನ ಸಹ ಉಂಟಾಗುತ್ತಿದೆ.
ಸದ್ಯ ನಾಯಿ ದಾಳಿಗೆ ಒಳಗಾದವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಕೋರಮಂಗಲದ ಜನ ಆತಂಕದಲ್ಲೇ BBMPಗೆ ಕರೆ ಮಾಡಿ ವಿಷಯ ತಿಳಿಸಿದ್ದು ಸಮಸ್ಯೆ ಬಗೆ ಹರಿದಿದೆ. ಆದ್ರೆ ನಾಯಿ ಜನರನ್ನು ಕಚ್ಚುವ ಮುನ್ನವೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಿದ್ದಾರೆ ನಾಯಿ ದಾಳಿ ತಪ್ಪುತ್ತಿತ್ತು. ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಹಾಗೂ ಅವುಗಳಿಗೆ ಆಗಾಗ ಆರೋಗ್ಯ ಪರೀಕ್ಷೆ ಮಾಡುವ ಕಾರ್ಯವನ್ನು ಬಿಬಿಎಂಪಿ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.