ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್​ಗಳು..!

ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾಗಿದೆ. ಟೆಸ್ಲಾ ನೆಪದಲ್ಲಿ ನೆಟಿಜನ್ನರ ಹಾಸ್ಯಪ್ರಜ್ಞೆ ಮತ್ತೊಮ್ಮೆ ವಿಜೃಂಭಿಸಿದೆ. ಇಲ್ಲಿದೆ ಮೀಮ್ ಲೋಕ, ಕಣ್ತುಂಬಿಕೊಳ್ಳಿ.

ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್​ಗಳು..!
ಟೆಸ್ಲಾ ಕಾರಿಗೆ ಭಾರತದ ಹದಗೆಟ್ಟ ರಸ್ತೆಗಳನ್ನು ನೋಡಿದರೆ ಏನನ್ನಿಸಬಹುದು!? ನೀವೂ ಯೋಚಿಸಿ..
Edited By:

Updated on: Jan 17, 2021 | 4:20 PM

ಟೆಸ್ಲಾ ಕಂಪನಿಯ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಬೆಂಗಳೂರಲ್ಲಿ ಸ್ಥಾಪನೆಯ ಸುದ್ದಿ ಘೋಷಣೆಯಾಗುತ್ತಿದ್ದಂತೆ ಟ್ವಿಟರರ್​ನಲ್ಲಿ ಮೀಮ್​ಗಳ ಸುರಿಮಳೆಯಾಗಿದೆ. ನೆಟ್ಟಿಗರು ತಮ್ಮ ಹಾಸ್ಯಪ್ರಜ್ಞೆಗೆ ಚೂರು ಬಿಡುವು ನೀಡದೆ ಕೆಲಸ ಕೊಟ್ಟಿದ್ದಾರೆ! ಕರ್ನಾಟಕದ ರಸ್ತೆಗಳ ಪರಿಸ್ಥಿತಿ ಮತ್ತು ಟೆಸ್ಲಾ ಕಾರುಗಳನ್ನು ಹೋಲಿಸಿ ಎಂತೆಂಥ ಮೀಮ್ ಸೃಷ್ಟಿಸಿದ್ದಾರೆ ನೀವೇ ನೋಡಿ..

ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರ ಹೆಸರು ಬದಲಿಸುವ ಯೋಜನೆಗಳು ಸಹ ಮೀಮ್ ಸೃಷ್ಟಿಕರ್ತರಿಗೆ ವಸ್ತುವಾಗಿದೆ.

ಈ ಮೀಮ್​ಗಳು ಟೆಸ್ಲಾ ತನ್ನ ಘಟಕವನ್ನು ಬೆಂಗಳೂರಲ್ಲಿ ಆರಂಭಿಸಿದ ಮಾತ್ರಕ್ಕೆ ಭಾರತದಲ್ಲಿ ಯಾವುದೋ ಬೃಹತ್ ಬದಲಾವಣೆಯಂತೂ ಆಗಲ್ಲ, ನಮ್ಮ ವ್ಯವಸ್ಥೆಗಳೇ ಹಾಗಿವೆ ಎಂಬುದನ್ನು ಹೇಳುತ್ತಿರುವುದಂತೂ ಸತ್ಯ.