ನಾನು ಏನೇ ಹೇಳಿದ್ರೂ RSSನವರು ವಿವಾದ ಮಾಡುತ್ತಾರೆ: ಸಿದ್ದರಾಮಯ್ಯ ಬೇಸರ
ವಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಏನು ಮಾತನಾಡಿದರೂ ಅದು ವಿವಾದ ಆಗುತ್ತಿದೆ. ಈ ವಿವಾದಕ್ಕೆ ಆರ್ಎಸ್ಎಸ್ನವರೇ ನೇರ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರು: ಏನೇ ಇದ್ದರೂ ನೇರವಾಗಿ ಮಾತನಾಡುವ ವ್ಯಕ್ತಿ ನಾನು. ಆದರೆ, ನನ್ನ ಮಾತಿಗೆ ಆರ್ಎಸ್ಎಸ್ನವರು ರಂಗುರಂಗಿನ ಬಣ್ಣ ಕಟ್ಟುತ್ತಾರೆ. ಹೀಗಾಗಿ, ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತಿದೆ. ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ.
ಮೈಸೂರಿನಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ನನ್ನದೇನಿದ್ದರೂ ನೇರ ಮಾತು. ನಾನು ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಆದರೆ ನನ್ನ ಹೇಳಿಕೆಯನ್ನು ಆರ್ಎಸ್ಎಸ್ನವರು ತಿರುಚುತ್ತಾರೆ. ಹೀಗಾಗಿ, ನನ್ನ ಮಾತು ವಿವಾದಕ್ಕೆ ಸಿಲುಕುತ್ತದೆ ಎಂದರು.
ಹನುಮ ಜಯಂತಿ ದಿನ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡುತ್ತಾ ‘ಹನುಮ ಹುಟ್ಟಿದ್ದು ಯಾವಾಗ ಗೊತ್ತೇನೋ’ ಎಂದು ಕೇಳಿದ್ದ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಹನುಮ ಹುಟ್ಟಿದ್ದು ಯಾವಾಗ ಎಂದು ನನಗೆ ಗೊತ್ತಿಲ್ಲ. ಹೀಗಾಗಿ ನಿಮಗ್ಯಾರಿಗಾದರೂ ಗೊತ್ತಿದ್ರೆ ಹೇಳಿ ಎಂದು ಕೇಳಿದ್ದೆ. ಆರ್ಎಸ್ಎಸ್ನವರು ಅದಕ್ಕೇ ವಿವಾದ ಮಾಡಿಬಿಟ್ಟರು ಎಂದು ಬೇಸರ ಹೊರ ಹಾಕಿದರು.
ಇನ್ನು, ಗೋಮಾಂಸ ತಿನ್ನುವ ವಿಚಾರ ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆಯೂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಗೋಮಾಂಸ ಸೇವನೆ ಅವರ ಆಹಾರದ ಹಕ್ಕು, ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದೆ. ಆರ್ಎಸ್ಎಸ್ನವರು ಆ ಹೇಳಿಕೆಯನ್ನು ವಿವಾದ ಮಾಡಿದರು. 1 ಹಸು, ಎಮ್ಮೆ, ಎತ್ತು ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ತಿಂಗಳಿಗೆ 3 ಸಾವಿರ ರೂ. ಬೇಕಾಗುತ್ತದೆ ಎಂದು ಆಲೋಚಿಸಿ ಹೇಳಿದರೆ ಅದನ್ನೂ ವಿವಾದ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಒಂದು ನಡವಳಿಕೆಯೇ ಗುಲಾಮಗಿರಿಯ ಸಂಕೇತ ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತಾರೆ. ನಂತರ ಯಾವ ಜಾತಿ ಎಂದು ಕೇಳ್ತಾರೆ. ನಾವು ಪುರೋಹಿತರನ್ನು ಕಂಡರೆ ತಲೆ ಬಗ್ಗಿಸಿ ನಮಸ್ಕರಿಸುತ್ತೇವೆ. ಅದೇ ದಲಿತರನ್ನ ಕಂಡರೆ ಏನ್ಲಾ? ಎಂದು ಕರೆಯುತ್ತೇವೆ. ಈ ಒಂದು ನಡವಳಿಕೆಯೇ ಗುಲಾಮಗಿರಿಯ ಸಂಕೇತವಾಗಿದೆ. ಬೇರೆಯವರಿಗೆ ಕೆಡಕು ಬಯಸದಿದ್ದರೆ ಅದೇ ಧರ್ಮ. ಧರ್ಮದ ಬಗ್ಗೆ ಪುಸ್ತಕ ಓದಿದರೆ ತಲೆ ಕೆಟ್ಟು ಹೋಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಏಪ್ರಿಲ್ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ