ಏಳು ಎಪಿಸೋಡ್ಗಳನ್ನು ಪೂರೈಸಿರುವ ನಾಟಕವು 60ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡು ಸ್ಟ್ರೀಮರ್ಸ್ ರ್ಯಾಂಕಿಂಗ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ನೆಟ್‌ಫ್ಲಿಕ್ಸ್‌ನ ಸೀಮಿತ ಸರಣಿ ದಿ ಕ್ವೀನ್ಸ್ ಗ್ಯಾಂಬಿಟ್ ಸ್ಟ್ರೀಮರ್‌ಗಾಗಿ ವೀಕ್ಷಕರ ದಾಖಲೆಯನ್ನು ಸೃಷ್ಟಿಸಿದೆ.
ಚೆಸ್ ಪ್ರಾಡಿಜಿ (ಅನ್ಯಾ ಟೇಲರ್-ಜಾಯ್) chess prodigy (Anya Taylor-Joy) ಕುರಿತ ಏಳು ಎಪಿಸೋಡ್ಗಳನ್ನು ಹೊಂದಿರುವ ದಿ ಕ್ವೀನ್ಸ್ ಗ್ಯಾಂಬಿಟ್ ನಾಟಕವು ವ್ಯಸನ ಮತ್ತು ಭಾವನಾತ್ಮಕ ಸಮಸ್ಯೆಗಳೊಂದಿಗೆ ಹೋರಾಡುವ ಯುವತಿಯ ಕಥೆಯಾಗಿದೆ. ಇದು ನೆಟ್‌ಫ್ಲಿಕ್ಸ್‌ಗೆ ಇದುವರೆಗೆ ಟಾಪ್ ಸ್ಕ್ರಿಪ್ಟೆಡ್ ಸೀಮಿತ ಸರಣಿಯಾಗಿದೆ. ವಿಶ್ವಾದ್ಯಂತ 62 ಮಿಲಿಯನ್ ನೆಟ್‌ಫ್ಲಿಕ್ಸ್ ಖಾತೆ ಹೊಂದಿರುವ ಸದಸ್ಯರು ನಾಟಕದ ಮೊದಲ ನಾಲ್ಕು ವಾರಗಳಲ್ಲಿ ಪ್ರದರ್ಶನದ ಕನಿಷ್ಠ ಒಂದೆರಡು ನಿಮಿಷಗಳನ್ನು ವೀಕ್ಷಿಸಿದ್ದಾರೆ ಎಂದು ಸ್ಟ್ರೀಮರ್ ಹೇಳುತ್ತದೆ. ಸದ್ಯ ನೆಟ್ಫ್ಲಿಕ್ಸ್ನಲ್ಲಿ ಈ ನಾಟಕವು ಸಕ್ಕತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
ವೀಕ್ಷಕರ ಮೆಚ್ಚುಗೆಗೆ ದಿ ಕ್ವೀನ್ಸ್ ಗ್ಯಾಂಬಿಟ್ ನಾಟಕ ತಂಡ ಅಭಿನಂದನೆ ಸಲ್ಲಿಸಿದೆ. ನಮಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದೆ ಮತ್ತು ಬೆರಗಾಗಿದ್ದೇವೆ. ಇಂತಹ ಸ್ಪಂದನೆ ಸಿಗುತ್ತೇ ಎಂದು ನಮ್ಮಲ್ಲಿ ಯಾರೊಬ್ಬರೂ ಊಹಿಸಿರಲಿಲ್ಲ ಎಂದು ನಾಟಕದ ಕೋ ಕ್ರಿಯೇಟರ್, ಪ್ರದರ್ಶಕ ಮತ್ತು ನಿರ್ದೇಶಕ ಸ್ಕಾಟ್ ಫ್ರಾಂಕ್ ಹೇಳಿದರು.