ಕೊರೊನಾ ಸಂಕಷ್ಟದ ನಡುವೆ ಚಿಗುರಿಕೊಂಡ ಸ್ಥಳೀಯ ಉದ್ಯಮಗಳಿವು!

ಕೊವಿಡ್ ಕರಿನೆರಳು ಬೀಸಿತೆಂದು ಯಾಕೆ ಹತಾಶರಾಗಬೇಕು. ಉದ್ಯೋಗ ನಷ್ಟದ ಬಗ್ಗೆಯೇ ಯಾಕೆ ಮಾತನಾಡಬೇಕು. ಕಷ್ಟಗಳನ್ನೇ ಅವಕಾಶವಾಗಿಸಿ ಬಾಳಲ್ಲಿ ಗೆದ್ದವರು ಹಲವರಿದ್ದಾರೆ. ಯಶಸ್ಸಿನ ಏಣಿಯಲ್ಲಿ ಎತ್ತರಕ್ಕೆ ಏರಿದವರ ಬಗ್ಗೆ ನೀವು ಗಮನಹರಿಸಬೇಕಷ್ಟೆ. ಚಿಂತೆ ಮರೆತು ಬದುಕೋಕೆ ಕಲಿತುಕೊಳ್ಳಬೇಕಷ್ಟೆ. ಮತ್ಯಾಕೆ ತಡ..? ಕೊವಿಡ್ ಕಾಲದಲ್ಲಿ ಯಶಸ್ವಿಯಾದ ನವೋದ್ಯಮಗಳ ಬಗ್ಗೆ ತಿಳಿಯೋಣ ಬನ್ನಿ. ಮನೆಯಲ್ಲೇ ಕೂತು ಮಾಸ್ಕ್ ಮಾಡಿದರು! ಕೊರೊನಾ ತಡೆಗಟ್ಟಲು ತಿಳಿಸಿದ ಮೂರು ಮುಖ್ಯ ಸೂತ್ರಗಳಲ್ಲಿ ಮಾಸ್ಕ್ ಧರಿಸುವುದು ಕೂಡ ಒಂದು. ಮುಖಗವಸು ಧರಿಸುವುದರಿಂದ ಕೊವಿಡ್ ಹರಡುವಿಕೆ ಕಡಿಮೆ ಮಾಡಬಹುದು. […]

ಕೊರೊನಾ ಸಂಕಷ್ಟದ ನಡುವೆ ಚಿಗುರಿಕೊಂಡ ಸ್ಥಳೀಯ ಉದ್ಯಮಗಳಿವು!
Follow us
Skanda
|

Updated on:Nov 24, 2020 | 9:35 AM

ಕೊವಿಡ್ ಕರಿನೆರಳು ಬೀಸಿತೆಂದು ಯಾಕೆ ಹತಾಶರಾಗಬೇಕು. ಉದ್ಯೋಗ ನಷ್ಟದ ಬಗ್ಗೆಯೇ ಯಾಕೆ ಮಾತನಾಡಬೇಕು. ಕಷ್ಟಗಳನ್ನೇ ಅವಕಾಶವಾಗಿಸಿ ಬಾಳಲ್ಲಿ ಗೆದ್ದವರು ಹಲವರಿದ್ದಾರೆ. ಯಶಸ್ಸಿನ ಏಣಿಯಲ್ಲಿ ಎತ್ತರಕ್ಕೆ ಏರಿದವರ ಬಗ್ಗೆ ನೀವು ಗಮನಹರಿಸಬೇಕಷ್ಟೆ. ಚಿಂತೆ ಮರೆತು ಬದುಕೋಕೆ ಕಲಿತುಕೊಳ್ಳಬೇಕಷ್ಟೆ. ಮತ್ಯಾಕೆ ತಡ..? ಕೊವಿಡ್ ಕಾಲದಲ್ಲಿ ಯಶಸ್ವಿಯಾದ ನವೋದ್ಯಮಗಳ ಬಗ್ಗೆ ತಿಳಿಯೋಣ ಬನ್ನಿ.

ಮನೆಯಲ್ಲೇ ಕೂತು ಮಾಸ್ಕ್ ಮಾಡಿದರು! ಕೊರೊನಾ ತಡೆಗಟ್ಟಲು ತಿಳಿಸಿದ ಮೂರು ಮುಖ್ಯ ಸೂತ್ರಗಳಲ್ಲಿ ಮಾಸ್ಕ್ ಧರಿಸುವುದು ಕೂಡ ಒಂದು. ಮುಖಗವಸು ಧರಿಸುವುದರಿಂದ ಕೊವಿಡ್ ಹರಡುವಿಕೆ ಕಡಿಮೆ ಮಾಡಬಹುದು. ಈ ಸೂಚನೆ ಸಿಗುತ್ತಿದ್ದಂತೆ ಒಂದಷ್ಟು ಮಂದಿ ಮಾಸ್ಕ್ ತಯಾರಿಸುವ ಗೃಹೋದ್ಯಮಕ್ಕೆ ತೊಡಗಿಕೊಂಡರು. ಹೊಲಿಗೆ ಕೆಲಸ ಬಲ್ಲವರು ಬಟ್ಟೆ ಕತ್ತರಿಸಿ ಮಾಸ್ಕ್ ಮಾಡಿಯೇಬಿಟ್ಟರು. ಕೊವಿಡ್ ಕಾರಣಕ್ಕೆ ಮನೆಯಿಂದ ಹೊರಹೋಗಬಾರದು ಎಂದರೆ, ಮನೆಯಲ್ಲೇ ಕುಳಿತು ಮಾಸ್ಕ್ ಹೊಲಿದು ಗೆದ್ದುಬಿಟ್ಟರು. ಬಣ್ಣಬಣ್ಣದ, ವಿಧವಿಧದ ಮಾಸ್ಕ್ಗಳು ವಿವಿಧ ಆಕಾರ, ಸ್ವರೂಪ ಪಡೆದು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. 20, 30 ರೂಪಾಯಿ ಎಂದು ಆರಂಭವಾಗಿ 200, 300 ರೂಪಾಯಿಗಳ ಮಾಸ್ಕ್ಗಳು ಜನರನ್ನು ಆಕರ್ಷಿಸಿದವು. ವಿಶೇಷವಾಗಿ ಮಹಿಳೆಯರೂ ಈ ಕೆಲಸದಲ್ಲಿ ತೊಡಗಿಕೊಂಡರು. ಹೆಚ್ಚೇನು ಹೂಡಿಕೆ ಬೇಡದ ಈ ಕೆಲಸ ಮಧ್ಯಮ ವರ್ಗದ ಹಲವಾರು ಕುಟುಂಬಗಳಿಗೆ ವರವಾಯ್ತು.

ಆಯುರ್ವೇದ, ಇಮ್ಯುನಿಟಿ ಬೂಸ್ಟರ್ಗಳಿಗೆ ಸಾಲು ಸಾಲು ಬೇಡಿಕೆ! ಕೊವಿಡ್ ಸಮಯದಲ್ಲಿ ಅತಿ ಯಶಸ್ಸು ಪಡೆದದ್ದು ಆಯುರ್ವೇದ ಔಷಧ ಉದ್ಯಮಗಳು ಮತ್ತು ಇಮ್ಯುನಿಟಿ ಬೂಸ್ಟರ್ ಅಂಗಡಿಗಳು. ಸ್ಥಳೀಯವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಇಮ್ಯುನಿಟಿ ಬೂಸ್ಟರ್ಸ್, ಹರ್ಬಲ್ಸ್ ಶಾಪ್​ಗಳು ತೆರೆದುಕೊಂಡು, ಚೂರ್ಣ, ಲೇಹ್ಯ, ಗುಳಿಗೆಗಳು ಮಾರಾಟಗೊಂಡವು. ಇವುಗಳನ್ನು ಬಳಸುವ ಬಗ್ಗೆ ತಜ್ಞರ ಅಭಿಪ್ರಾಯ ಭಿನ್ನವಾಗಿದ್ದರೂ, ಉದ್ಯಮವಾಗಿ ಆಯುರ್ವೇದ, ಇಮ್ಯುನಿಟಿ ಬೂಸ್ಟರ್ಸ್ ಯಶಸ್ವಿಯಾದದ್ದು ಸತ್ಯ.

ಮುಟ್ಟಿದರೆ ಮುನಿಯುವ ಕೊರೊನಾವನ್ನು ಮೆಟ್ಟಿ ಗೆಲ್ಲಲು ಹೊಸ ಯಂತ್ರ! ಕೊರೊನಾ ವೈರಾಣು ಮುಟ್ಟಿದರೆ ಮುನಿದುಬಿಡುತ್ತೆ. ಹಾಗಾಗಿ ನಮ್ಮ ಕೈಗಳ ಸ್ವಚ್ಛತೆ ಕಾಪಾಡುವುದು ಅತಿ ಅಗತ್ಯ. ಈ ಮೊದಲು ಕೈಗಳಿಂದ ಏನು ಮುಟ್ಟುತ್ತೇವೆ, ಎಲ್ಲಿ ಮುಟ್ಟುತ್ತೇವೆ ಎಂಬ ಬಗ್ಗೆ ಅಷ್ಟಾಗಿ ಗಮನಹರಿಸದ ನಾವು ಕೊವಿಡ್ ಕಾಲದಲ್ಲಿ ಬಹಳ ಕಾಳಜಿ ವಹಿಸುತ್ತಿದ್ದೇವೆ. ಪದೇಪದೇ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳುತ್ತಿದ್ದೇವೆ. ಅಯ್ಯೋ..ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಾಟಲಿಯನ್ನು ಹೇಗೆ ಮುಟ್ಟೋಣ ಎಂದು ಹಲವರು ಚಿಂತಿಸುತ್ತಿದ್ದರೆ ಅದಕ್ಕೆ ಪರಿಹಾರ ತೋರಿಸಿದ್ದು ಸ್ಯಾನಿಟೈಸರ್ ಯಂತ್ರಗಳು. ಸ್ಥಳೀಯವಾಗಿ ತಯಾರಾದ ಸ್ಯಾನಿಟೈಸರ್ ಮೆಷಿನ್ಗಳು ದೊಡ್ಡ ಹೆಸರು ಮಾಡಿದವು. ಕಾಲೇಜು ವಿದ್ಯಾರ್ಥಿಗಳು, ಫ್ಲಂಬರ್ ಕೆಲಸಗಾರರು, ಸ್ಥಳೀಯ ಜನರೇ ಹೊಸ ಬಗೆಯ ಯಂತ್ರಗಳನ್ನು ಕಂಡುಹಿಡಿದು ಯಶಸ್ವಿಯಾದರು. ಕಾಲಿನಿಂದ ತುಳಿದು ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವ ಯಂತ್ರಗಳು ಕೊರೊನಾ ಹಿಮ್ಮೆಟ್ಟಿಸಲು ಸಹಕರಿಸಿದವು.

ಹೋಮ್ ಡೆಲಿವರಿ ಎಂಬ ಹೋಮ್ಲಿ ಸೇವೆ! ಮನೆ ಮಕ್ಕಳಂತೆ ಮನೆ ಮನೆಗೆ ತೆರಳಿ ಹಣ್ಣು, ತರಕಾರಿ, ಔಷಧ ಇತ್ಯಾದಿಗಳನ್ನು ಕೊಟ್ಟು ಅದನ್ನೇ ನವೋದ್ಯಮವಾಗಿ ಪರಿವರ್ತಿಸಿಕೊಂಡವರು ಹಲವರಿದ್ದಾರೆ. ಹೋಮ್ ಡೆಲಿವರಿ ಸರ್ವೀಸ್ ಶುರುಮಾಡಿ ಗೆದ್ದವರಿದ್ದಾರೆ. ಈ ಮೊದಲು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಹೋಮ್ ಡೆಲಿವರಿ ಸೇವೆ ಈಗ ಹಳ್ಳಿಗಳಿಗೂ ವ್ಯಾಪಿಸಿವೆ. ಊರಿನ ಯುವಕರು ದೂರದ ಮನೆಗಳಿಗೆ ಅಗತ್ಯ ಸಾಮಾಗ್ರಿಗಳನ್ನು ಒಯ್ದು ಕೊಡುತ್ತಿದ್ದಾರೆ. ಸ್ವಿಗ್ಗಿ, ಝೊಮಾಟೊ ಮುಂತಾದ ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಸ್ಥಳೀಯ ಮಟ್ಟದಲ್ಲಿ ಸೆಡ್ಡು ಹೊಡೆದಿದ್ದಾರೆ. ಒಂದಷ್ಟು ಧನಲಾಭ ಜೊತೆಗೆ ಮನಃಸಂತೋಷ ಎರಡೂ ಸಿಗುವ ಕೆಲಸದ ಬಗ್ಗೆ ಯಾರಿಗಿರುತ್ತೆ ಬೇಜಾರು?!

ವರ್ಕ್ ಫ್ರಂ ಹೋಮ್​ಗೆ ವಿಶಾಲ ಚಾವಡಿ! ಮನೆಯ ತುಂಬಾ ಜನರಿರುವಾಗ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಪಟ್ಟಣದ ಸಮಸ್ಯೆಯಾದರೆ, ಹಳ್ಳಿಯಲ್ಲಿ ನೆಟ್ವರ್ಕ್ ಸಮಸ್ಯೆ. ಒಟ್ಟಿನಲ್ಲಿ ಎರಡೂ ಸಮಸ್ಯೆಗಳಿಗೆ ಪರಿಹಾರ ನೀಡಿದ್ದು, ಕೆಲಸ ಮಾಡಲು ಬಾಡಿಗೆ ಸ್ಥಳ ಒದಗಿಸುವ ಹೊಸತಾದ ಉದ್ಯಮ. ಮನೆಯಂಥಾ ಸ್ಥಳವನ್ನು ಬಾಡಿಗೆ ಕೊಡುವುದು, ವೈಫೈ ಸೌಲಭ್ಯ ನೀಡುವುದು, ಫ್ಯಾನು, ಕರೆಂಟು ಹೀಗೆ ಮುಖ್ಯ ಸವಲತ್ತುನೀಡಿ ವರ್ಕ್ ಫ್ರಂ ಹೋಮ್​ ಪರಿಕಲ್ಪನೆಯನ್ನು ಯಶಸ್ವಿಗೊಳಿಸಿದರು. ಸೇವೆ ನೀಡಿ, ಲಾಭಾಂಶ ಪಡೆದುಕೊಂಡು ತಾವೂ ಖುಷಿಪಟ್ಟರು.

ಎಸೆದ ಕಲ್ಲನ್ನು ಸೇರಿಸಿ ಮನೆ ಕಟ್ಟೋಣ ಎಂಬ ಮಾತಿನಂತೆ ಕಷ್ಟಗಳಿಂದ ಕುಗ್ಗದೆ ಎದ್ದು ನಿಲ್ಲಲು ಹಲವು ದಾರಿಗಳು ನಮ್ಮ ಮುಂದಿರುತ್ತವೆ. ಮುನ್ನಡೆಯುವ ಪ್ರಯತ್ನವನ್ನು ನಾವು ಮಾಡಬೇಕು.

-ಗಣಪತಿ ದಿವಾಣ

Published On - 9:03 am, Tue, 24 November 20

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್