AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ಜಿ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಪ್ರಶ್ನಿಸಿದ್ದ ಮನವಿಗಳನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಮಾಜಿ ಟೆಲಿಕಾಂ ಸಚಿವ ಎ ರಾಜಾ ಸೇರಿದಂತೆ 2ಜಿ ಹಗರಣದಲ್ಲಿ ಭಾಗಿಯಾಗಿದ್ದ ಇತರರ ಖುಲಾಸೆಯನ್ನು ಪ್ರಶ್ನಿಸಿ ಕೇಂದ್ರದ ಅನುಮೋದನೆಯ ಮೇರೆಗೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮನವಿಯನ್ನು ಪ್ರಶ್ನಸಿ ಸಲ್ಲಿಸಿದ್ದ ಹಲವಾರು ಮನವಿಗಳನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸದರಿ ಮನವಿಗಳನ್ನು ಸಿಬಿಐ ಸಲ್ಲಿಸಿತ್ತೆಂದು ನ್ಯಾಯಮೂರ್ತಿ ಬ್ರಿಜೇಶ್ ಸೇಠಿ ಹೇಳಿದರು. ನವೆಂಬರ 20 ರಂದು ನಿರ್ಗಮಿಸಲಿರುವ ನ್ಯಾಯಮೂರ್ತಿ ಸೇಠಿಯವರು, ಮುಖ್ಯ ನ್ಯಾಯಾಧೀಶರ ಅವಗಾಹನೆಗೆ ತಂದು ಸದರಿ ಮನವಿಗಳನ್ನು ಬಿಡುಗಡೆ ಮಾಡಿದ್ದು ಅವು ಬೇರೊಂದು ಪೀಠದೆದುರು ಡಿಸೆಂಬರ್ 1 ರಂದು […]

2ಜಿ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಪ್ರಶ್ನಿಸಿದ್ದ ಮನವಿಗಳನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2020 | 8:21 PM

Share

ಮಾಜಿ ಟೆಲಿಕಾಂ ಸಚಿವ ಎ ರಾಜಾ ಸೇರಿದಂತೆ 2ಜಿ ಹಗರಣದಲ್ಲಿ ಭಾಗಿಯಾಗಿದ್ದ ಇತರರ ಖುಲಾಸೆಯನ್ನು ಪ್ರಶ್ನಿಸಿ ಕೇಂದ್ರದ ಅನುಮೋದನೆಯ ಮೇರೆಗೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮನವಿಯನ್ನು ಪ್ರಶ್ನಸಿ ಸಲ್ಲಿಸಿದ್ದ ಹಲವಾರು ಮನವಿಗಳನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ಸದರಿ ಮನವಿಗಳನ್ನು ಸಿಬಿಐ ಸಲ್ಲಿಸಿತ್ತೆಂದು ನ್ಯಾಯಮೂರ್ತಿ ಬ್ರಿಜೇಶ್ ಸೇಠಿ ಹೇಳಿದರು.

ನವೆಂಬರ 20 ರಂದು ನಿರ್ಗಮಿಸಲಿರುವ ನ್ಯಾಯಮೂರ್ತಿ ಸೇಠಿಯವರು, ಮುಖ್ಯ ನ್ಯಾಯಾಧೀಶರ ಅವಗಾಹನೆಗೆ ತಂದು ಸದರಿ ಮನವಿಗಳನ್ನು ಬಿಡುಗಡೆ ಮಾಡಿದ್ದು ಅವು ಬೇರೊಂದು ಪೀಠದೆದುರು ಡಿಸೆಂಬರ್ 1 ರಂದು ಪಟ್ಟಿಯಾಗಲಿವೆಯೆಂದು ಹೇಳಿದರು.

ಹಾಗೆಯೇ, ಪ್ರಕರಣದಿಂದ ಖುಲಾಸೆಗೊಂಡಿರುವ ಕೆಲ ವ್ಯಕ್ತಿಗಳು, ಮನವಿಯೊಂದನ್ನು ಸಲ್ಲಿಸುವ ಮೊದಲು, ಅದಕ್ಕೆ ಅನುಸರಿಸಬಹುದಾದ ಮಾರ್ಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೇಂದು ಸಲ್ಲಿಸಿದ ಮನವಿಯನ್ನು ಸಹ ಹೈಕೋರ್ಟ್ ತಳ್ಳಿಹಾಕಿತು.

ಮನವಿಯನ್ನು ಸಲ್ಲಿಸಲು ಅದಕ್ಕೆ ಪೂರಕವಾದದ ಅನುಮೋದನೆಯ ಪತ್ರಗಳನ್ನು ಬಹಿರಂಗಗೊಳಿಸಬೇಕಾದ ನಿಬಂಧನೆ ಸರ್ಕಾರದ ಮೇಲಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿತು.

ದೆಹಲಿ ಹೈಕೋರ್ಟ್, ತನಿಖಾ ದಳವು ಖುಲಾಸೆ ವಿರುದ್ಧ ಸಲ್ಲಿಸಿದ್ದ ಲೀವ್ ಟು ಅಪೀಲ್ ಮನವಿಗಳನ್ನು ಅಕ್ಟೋಬರ್ ತಿಂಗಳಲ್ಲಿ ದಿನಂಪ್ರತಿ ವಿಚಾರಣೆ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಸಿಆರ್​ಪಿಸಿ ಸೆಕ್ಷನ್378 (2) ವ್ಯಾಪ್ತಿಯನ್ನು ಮೀರಿದ ಕಾರಣ ಈ ಮನವಿಯನ್ನು ಅಂಗೀಕರಿಸಲಾಗದು. ತನಿಖಾ ಸಂಸ್ಥೆ ಮೇಲ್ಮನವಿ ಸಲ್ಲಿಸುವ ಹಿಂದಿನ ಹಂತಗಳಿಗೆ ಈ ನಿಬಂಧನೆ ಒಳಪಟ್ಟಿಲ್ಲ. ಸಿಬಿಐಗಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿರುವ ಮೇಲ್ಮನವಿ ಸಾಕು ಎಂದು ನ್ಯಾಯಮೂರ್ತಿ ಸೇಠಿ ಹೇಳಿದ್ದಾರೆ.

ಈಗಾಗಲೇ ನಡೆದ ಅಪರಾಧಗಳಿಗೆ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ, ಹಿಂದಿನ ಕಾನೂನನ್ನು ಅಳಿಸುವ ಉದ್ದೇಶ ಕೋರ್ಟಿಗಿಲ್ಲವೆಂದು ನ್ಯಾಯಮೂರ್ತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಿದ್ಧಾರ್ಥ ಬೆಹುರಾ, ರಾಜೀವ್ ಅಗರ್ವಾಲ್ ಮತ್ತು ಶರದ್ ಕುಮಾರ್ ಸೆಕ್ಷನ್ 378 (2) ಸಿಆರ್​ಪಿಸಿ ಅಡಿಯಲ್ಲಿಅಗತ್ಯ ಕಾರ್ಯವಿಧಾನವನ್ನುಅನುಸರಿಸದೆ ವಿಚಾರಣಾ ನ್ಯಾಯಾಲಯದ 2G ಸ್ಪೆಕ್ಟ್ರಂ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.