ಅಸಭ್ಯ ವರ್ತನೆ: ಪ್ರಶ್ನಿಸಿದಕ್ಕೆ CCD ಮ್ಯಾನೇಜರ್‌ಗೆ ಹತ್ತು ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ
ಬೆಂಗಳೂರು: ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫಿ ಡೆೇ ಯಲ್ಲಿ ನಡೆದಿದೆ. ಘಟನೆಯಲ್ಲಿ CCD ಮ್ಯಾನೇಜರ್ ನವೀನ್ ಕುಮಾರ್ ಗಾಯಗೊಂಡಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇಗೆ ಬಂದಿದ್ದ ವ್ಯಕ್ತಿ ವಾಶ್ ರೂಂ ಬಳಸುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ ಹೀಗಾಗಿ ಈ ಬಗ್ಗೆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ್ದಕ್ಕೆ ಮ್ಯಾನೆೇಜರ್ ಜೊತೆ ಗಲಾಟೆ ಮಾಡಿದ್ದಾನೆ. ನಂತರ ಮ್ಯಾನೇಜರ್ ತಲೆಗೆ […]
ಬೆಂಗಳೂರು: ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫಿ ಡೆೇ ಯಲ್ಲಿ ನಡೆದಿದೆ. ಘಟನೆಯಲ್ಲಿ CCD ಮ್ಯಾನೇಜರ್ ನವೀನ್ ಕುಮಾರ್ ಗಾಯಗೊಂಡಿದ್ದಾರೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇಗೆ ಬಂದಿದ್ದ ವ್ಯಕ್ತಿ ವಾಶ್ ರೂಂ ಬಳಸುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ ಹೀಗಾಗಿ ಈ ಬಗ್ಗೆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ್ದಕ್ಕೆ ಮ್ಯಾನೆೇಜರ್ ಜೊತೆ ಗಲಾಟೆ ಮಾಡಿದ್ದಾನೆ. ನಂತರ ಮ್ಯಾನೇಜರ್ ತಲೆಗೆ ಹತ್ತು ಹೊಲಿಗೆ ಹಾಕುವಂತೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಮ್ಯಾನೇಜರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published On - 7:30 am, Tue, 24 November 20