ಘಟನೆ ಹಿಂದಿರುವ ಷಡ್ಯಂತ್ರ, ಕಾಣದ ಕೈಗಳ ಬಗ್ಗೆ ತನಿಖೆ ಮಾಡಲಾಗುವುದು; ಸಿಎಂ ಬಸವರಾಜ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 19, 2022 | 3:29 PM

ಆತ್ಮಹತ್ಯೆ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರಾಯಶ್ಚಿತ್ತ ನಿಧಿ ಸಂಗ್ರಹ ಮಾಡಲಾಗುತ್ತಿದ್ದು, ಸಮಾಜದವರು ಆರ್ಥಿಕ ಸಹಾಯ ಮಾಡಿದರೆ ತಪ್ಪೇನಿಲ್ಲ ಎಂದು ಸಿಎಂ ಹೇಳಿದ್ದಾರೆ. 

ಘಟನೆ ಹಿಂದಿರುವ ಷಡ್ಯಂತ್ರ, ಕಾಣದ ಕೈಗಳ ಬಗ್ಗೆ ತನಿಖೆ ಮಾಡಲಾಗುವುದು; ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಶಿವಮೊಗ್ಗ: ಘಟನೆ ಹಿಂದಿರುವ ಷಡ್ಯಂತ್ರ ಹಾಗೂ ಕಾಣದ ಕೈಗಳ ಬಗ್ಗೆ ಎಲ್ಲಾ ಆಯಾಮದಿಂದ ತನಿಖೆ (Investigat) ಆಗುತ್ತಿದೆ. ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡರ ಪಾತ್ರದ ಆರೋಪ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಪ್ರಚೋದನಕಾರಿ ವಾಟ್ಸಾಪ್​ ಸ್ಟೇಟಸ್​ನಿಂದ ಗಲಾಟೆ ಪ್ರಕರಣ ಹಿನ್ನೆಲೆ ಶಿವಮೊಗ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕೋಮು ಗಲಭೆಯಲ್ಲಿ ಭಾಗಿಯಾದವರ ವಿರುದ್ದ ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಲಾಗುವುದು. ಕೆಜೆ ಹಳ್ಳಿ ಡಿಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಕ್ರಮ ವಹಿಸಿದೆ. ಆತ್ಮಹತ್ಯೆ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರಾಯಶ್ಚಿತ್ತ ನಿಧಿ ಸಂಗ್ರಹ ಮಾಡಲಾಗುತ್ತಿದ್ದು, ಸಮಾಜದವರು ಆರ್ಥಿಕ ಸಹಾಯ ಮಾಡಿದರೆ ತಪ್ಪೇನಿಲ್ಲ ಎಂದು ಸಿಎಂ ಹೇಳಿದ್ದಾರೆ.

ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 12 ಪ್ರಕರಣ ದಾಖಲಾಗಿದೆ. ನಿನ್ನೆ ಮತ್ತೆ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 12 ಪ್ರಕರಣಗಳಲ್ಲಿ 104 ಆರೋಪಿಗಳ ಬಂಧನವಾಗಿದೆ. ಕೊಲೆ ಯತ್ನ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿ ಹಲವು ಪ್ರಕರಣ ದಾಖಲಾಗಿವೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರಿಂದ ತಲಾಶ್ ಶುರುವಾಗಿದೆ. ಆರೋಪಿಗಳನ್ನು ವಿಡಿಯೋ ಕಾನ್ಪೆರೆನ್ಸ್ ಮೂಲಕ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶನಿವಾರ ಹಳೇ ಹುಬ್ಬಳ್ಳಿಯಲ್ಲಿ ಗಲಭೆ ವೇಳೆ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನಾತ್ಮಕ ಭಾಷಣ ಮಾಡಿದ ವ್ಯಕ್ತಿಯ ಸುಳಿವು ಪತ್ತೆಯಾಗಿದೆ. ಕಾಂಗ್ರೆಸ್ ಮುಖಂಡ ಅಲ್ತಾಫ ಹಳ್ಳೂರ ಜತೆಗೆ ನಿಂತಿದ್ದ ವ್ಯಕ್ತಿಯ ಸುಳಿವು ಪೊಲೀಸ್ ಟೀಮ್ ಜಾಲಾಡುತ್ತಿದೆ.

ಇನ್ನು ಮತ್ತೊಂದು ಕಡೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರೋ ಧರ್ಮ ದಂಗಲ್‌ನ ಸೇಡಿನಿಂದಲೆ ನಡಿಯಿತಾ? ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಮುಸ್ಲಿಂ ಯುವಕರ ಮಾತು ಪುಷ್ಠಿ ನೀಡುವಂತಿದೆ. ಹಳೇ ಹುಬ್ಬಳ್ಳಿಯ ಠಾಣೆ ಬಳಿ ಜಮಾಯಿಸಿದ್ದ ಮುಸ್ಲಿಂ ಯುವಕರು ಇನ್ನು ಎಷ್ಟು ದಿನ ಸಹಿಸಕೊಳ್ಳಬೇಕು ಎನ್ನುತ್ತಿದ್ದರಂತೆ. ಈ ಒಂದು ಮಾತನ್ನು ಕೇಳಿಸಿಕೊಂಡರೆ ಬಹುಶಃ ಧರ್ಮ ದಂಗಲ್ನ ಸೇಡಿನಿಂದಲೇ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದದ್ದು ಎಂಬಂತಿದೆ. ಕಲ್ಲಂಗಡಿ ಬೀದಿಗೆಸೆದ್ದರಿಂದ ಭಾರಿ ಸಿಟ್ಟು ಅವರಲ್ಲಿ ಮನೆ ಮಾಡಿತ್ತು. ಅದೇ ಸಿಟ್ಟು, ಸೇಡು ಈ ಘಟನೆಯಲ್ಲಿ ತೋರಿಸಿ ಬಿಟ್ರಾ? ಎಐಎಂಐಎಂ ಮುಖಂಡ ಇರ್ಫಾನ್ ಭಾಗಿ ಹಿನ್ನಲೆ ರಾಜಕೀಯ ಕರಿನೆರಳಿನ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ:

‘ಭೀಮ’ ಸಿನಿಮಾ ಮುಹೂರ್ತದಲ್ಲಿ ಪುನೀತ್​ರನ್ನು ನೆನೆದ ದುನಿಯಾ ವಿಜಯ್