ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್ ಲೇಡಿ; ಒಂದೇ ಸೈಟ್ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!
ಒಂದೇ ಸೈಟ್ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ.

ದಾವಣಗೆರೆ: ಒಂದೇ ಸೈಟ್ನ್ನು ಹತ್ತಾರು ಜನರಿಗೆ ತೋರಿಸಿ, 1.5 ಕೋಟಿಗೂ ಹೆಚ್ಚು ಹಣ ಪಡೆದ ಖತರ್ನಾಕ್ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಯವಂಚಕಿ ವಿರುದ್ಧ ಶೈಲಜಾ ಎಂಬುವರು ಸೇರಿ ಹಲವು ಮಹಿಳೆಯರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೋಸದ ಕತೆ... ಪ್ರೀತಿ (40) ಎಂಬಾಕೆ ಬಂಧಿತೆ. ಒಂದೇ ಸೈಟ್ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ. ಹೀಗೆ ಮನೆಮನೆಗೆ ಹೋಗಿ, ಸೈಟ್ ಆಮಿಷ ಒಡ್ಡುತ್ತಿದ್ದಳು. ಅಷ್ಟೇ ಅಲ್ಲ, ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯೋರ್ವರಿಂದ ಸುಮಾರು 6 ಲಕ್ಷ ರೂ.ಸಾಲ ಪಡೆದಿದ್ದಳು. ಹಾಗೇ ಸುಮಾರು ಮನೆಗೆ ಹೋಗಿ ಚೆಕ್ ನೀಡಿ, ಹಣ ಪಡೆಯುತ್ತಿದ್ದಳು. ಆದರೆ ಹಣ ವಾಪಸ್ ಪಡೆಯಲು ಹೋದರೆ ಅಕೌಂಟ್ನಲ್ಲಿ ದುಡ್ಡೇ ಇರುತ್ತಿರಲಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.
Published On - 8:10 pm, Sat, 28 November 20