ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆ: ಲಸಿಕೆ ತಯಾರಿಕಾ ತಂಡಗಳ ಪರಿಶ್ರಮಕ್ಕೆ ಪ್ರಧಾನಿ ಶ್ಲಾಘನೆ

ದೇಶದ ಮೂರು ನಗರಗಳಲ್ಲಿರುವ ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಲಸಿಕೆ ತಯಾರಿ ಮತ್ತು ವಿತರಣೆ ಕುರಿತು ತಜ್ಞರ ಬಳಿ ಪ್ರಧಾನಿ ಮಾಹಿತಿ ಪಡೆದರು.

ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆ: ಲಸಿಕೆ ತಯಾರಿಕಾ ತಂಡಗಳ ಪರಿಶ್ರಮಕ್ಕೆ ಪ್ರಧಾನಿ ಶ್ಲಾಘನೆ
ಪುಣೆಯ ಸೆರಂ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯಾಗೆ ಬೇಟಿ ನೀಡಿದ ಪ್ರಧಾನಿ ಮೋದಿ ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಿದರು.
Follow us
guruganesh bhat
| Updated By: KUSHAL V

Updated on: Nov 28, 2020 | 8:13 PM

ಅಹಮದಾಬಾದ್/ ಹೈದರಾಬಾದ್/ಪುಣೆ: ದೇಶದ ಮೂರು ನಗರಗಳಲ್ಲಿರುವ ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಲಸಿಕೆ ತಯಾರಿ ಮತ್ತು ವಿತರಣೆ ಕುರಿತು ತಜ್ಞರ ಬಳಿ ಪ್ರಧಾನಿ ಮಾಹಿತಿ ಪಡೆದರು. ಅಹಮದಾಬಾದ್​ನ ಝೈಕೋವಿಡ್ ಲಸಿಕೆಗೆ ಪ್ರಧಾನಿ ಶ್ಲಾಘನೆ ಮೊದಲು ಅಹಮದಾಬಾದ್​ನಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್​ಗೆ ತೆರಳಿದ ಪ್ರಧಾನಿ ಮೋದಿ, ಝೈಕೋವಿಡ್ ಲಸಿಕೆ ಕುರಿತು ಸಂಸ್ಥೆಯ ತಜ್ಞರೊಂದಿಗೆ ಸಮಾಲೋಚಿಸಿದರು. ಎರಡನೇ ಹಂತದ ಪ್ರಯೋಗದ ತಯಾರಿಯಲ್ಲಿರುವ ಝೈಡಸ್ ಬಯೋಪಾರ್ಕ್ ಸಂಸ್ಥೆಯ ಲಸಿಕೆ ಕುರಿತು ತಜ್ಞರು ಪ್ರಧಾನಿ ಬಳಿ ವಿಶ್ವಾಸ ವ್ಯಕ್ತಪಡಿಸಿದರು. ನಂತರ ಟ್ವೀಟ್ ಮೂಲಕ, ಝೈಡಸ್​ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ DNA ಆಧಾರಿತ ಕರೊನಾ ಲಸಿಕೆ ಬಗ್ಗೆ ವಿವರಗಳನ್ನು ತಿಳಿದುಕೊಂಡೆ. ಲಸಿಕೆ ತಯಾರಿಕೆ ಹಿಂದೆ ಶ್ರಮಿಸುತ್ತಿರುವ ತಂಡವನ್ನು ಶ್ಲಾಘಿಸುತ್ತೇನೆ. ಭಾರತ ಸರ್ಕಾರ ಈ ತಂಡಕ್ಕೆ ಅಗತ್ಯ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಹೈದರಾಬಾದ್​ನಲ್ಲೇನಾಯ್ತು? ಮಧ್ಯಾಹ್ನ 1.30ಕ್ಕೆ ಹೈದರಾಬಾದ್ ಸಮೀಪದ ಭಾರತ್ ಬಯೋಟೆಕ್​ ಲಸಿಕೆ ಉತ್ಪಾದನಾ ಕಂಪನಿಗೆ ತಲುಪಿದ ಪ್ರಧಾನಿ ಮೋದಿ ಸಂಸ್ಥೆಯ ತಜ್ಞರ ಜೊತೆ ಚರ್ಚೆ ನಡೆಸಿದರು. ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ ಮತ್ತು ICMR ಸಹಯೋಗದಲ್ಲಿ ಉತ್ಪಾದನೆಯಾಗಿ ಮೂರನೇ ಹಂತದ ಪ್ರಯೋಗದಲ್ಲಿರುವ ಕೋವ್ಯಾಕ್ಸಿನ್ ಲಸಿಕೆಯ ಪ್ರಗತಿ ಕುರಿತು ಹರ್ಷ ವ್ಯಕ್ತಪಡಿಸಿದರು.

ಆಕ್ಸ್​ಫರ್ಡ್ ವಿವಿ ಲಸಿಕೆ ಪರಿಶೀಲನೆ ಪುಣೆಯಿಂದ 17 ಕಿ.ಮೀ ದೂರದಲ್ಲಿರುವ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಆಸ್ಟ್ರಾಜೆನೆಕಾ ಮತ್ತು ಆಕ್ಸ್​ಫರ್ಡ್​ ವಿವಿ ಸಹಯೋಗದಲ್ಲಿ ರೂಪಿಸಲಾದ ಲಸಿಕೆ ಲಭ್ಯತೆಯ ಕುರಿತು ಸಮಾಲೋಚನೆ ನಡೆಸಿದರು. ನಂತರ, ಸಂಜೆ 6 ಗಂಟೆಗೆ ದೆಹಲಿಯತ್ತ ಮುಖಮಾಡಿದರು. ಲಸಿಕೆಯ ತಯಾರಿ, ಬಿಡುಗಡೆ ಮತ್ತು ಹಂಚಿಕೆಯ ಕುರಿತು ಯೋಜನೆ ರೂಪಿಸಲು ಪ್ರಧಾನಿ ಮೋದಿಗೆ ಇಂದಿನ  ಭೇಟಿ ನೆರವಾಗಲಿದೆ ಎಂಬ ಮಾಹಿತಿ ದೊರೆತಿದೆ.

ಮೋದಿ ‘ಲಸಿಕೆ ಪ್ರವಾಸ’ಕ್ಕೆ ಕಾಂಗ್ರೆಸ್​ ಟೀಕೆ ಪ್ರಧಾನಿ ಕೈಗೊಂಡ ಇಂದಿನ ಭೇಟಿಯನ್ನು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟೀಕಿಸಿದ್ದಾರೆ. ಈ ಭೇಟಿ ಪ್ರಧಾನಿಯ ಇವೆಂಟ್ ಮ್ಯಾನೇಜ್​ಮೆಂಟ್​ನ ಭಾಗವೇ ಹೊರತು, ನೈಜ ಕಾಳಜಿ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ