50-70 ಸೋಂಕಿತರು ಸಾವು, ಬೆಂಗಳೂರಿನ ವಿದ್ಯುತ್ ಚಿತಾಗಾರಗಳು ಹೌಸ್ ಫುಲ್!
ಬೆಂಗಳೂರು:ಬೆಂಗಳೂರಿನಲ್ಲಿ ಪ್ರತಿ ನಿತ್ಯ ಕೊರೊನಾ ಸೋಂಕಿನಿಂದ 50 ರಿಂದ 70 ಜನ ಸಾವನ್ನಪ್ಪುತ್ತಿದ್ದು, ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿದೆ. ಬೆರಳೆಣಿಕೆಯಷ್ಟಿರುವ ಚಿತಾಗಾರಗಳ ಮುಂದೆ ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಓರ್ವ ಸೋಂಕಿತನ ಮೃತದೇಹವನ್ನು ಬರ್ನ್ ಮಾಡಲು ಒಂದು ಗಂಟೆ ಸಮಯ ಬೇಕಾಗಿದ್ದು, ನಿತ್ಯ 50-70 ಕೋವಿಡ್ ಮೃತದೇಹಗಳು ಬರುತ್ತಿವೆ. ಇದರಿಂದ ವಿಲ್ಸನ್ ಗಾರ್ಡನ್, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಬಾಳ ಚಿತಾಗಾರಗಳ ಮುಂದೆ ಕೋವಿಡ್ ಮೃತ ದೇಹ […]
ಬೆಂಗಳೂರು:ಬೆಂಗಳೂರಿನಲ್ಲಿ ಪ್ರತಿ ನಿತ್ಯ ಕೊರೊನಾ ಸೋಂಕಿನಿಂದ 50 ರಿಂದ 70 ಜನ ಸಾವನ್ನಪ್ಪುತ್ತಿದ್ದು, ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿದೆ. ಬೆರಳೆಣಿಕೆಯಷ್ಟಿರುವ ಚಿತಾಗಾರಗಳ ಮುಂದೆ ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಓರ್ವ ಸೋಂಕಿತನ ಮೃತದೇಹವನ್ನು ಬರ್ನ್ ಮಾಡಲು ಒಂದು ಗಂಟೆ ಸಮಯ ಬೇಕಾಗಿದ್ದು, ನಿತ್ಯ 50-70 ಕೋವಿಡ್ ಮೃತದೇಹಗಳು ಬರುತ್ತಿವೆ. ಇದರಿಂದ ವಿಲ್ಸನ್ ಗಾರ್ಡನ್, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಬಾಳ ಚಿತಾಗಾರಗಳ ಮುಂದೆ ಕೋವಿಡ್ ಮೃತ ದೇಹ ಹೊತ್ತ ಆಂಬುಲೆನ್ಸ್ ಗಳ ಸಾಲು ದಿನೇ ದಿನೇ ಹೆಚ್ಚುತ್ತಲೆ ಇದೆ. ಜೊತೆಗೆ ಕೊರೊನಾ ಸೋಂಕಿಲ್ಲದೆ ಮೃತಪಟ್ಟ ಮೃತ ದೇಹಗಳನ್ನ ತಂದ ಕುಟುಂಬಸ್ಥರು ಗಂಟೆಗಟ್ಟಲೆ ಆತಂಕದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.