Shivamogga Blast ಶಿವಮೊಗ್ಗದ ಆಸುಪಾಸಿನಲ್ಲಿ ಭೂಕಂಪನ ದಾಖಲಾಗಿಲ್ಲ ಎಂದು ಹೇಳುತ್ತಿವೆ ವರದಿಗಳು

| Updated By: guruganesh bhat

Updated on: Jan 22, 2021 | 2:33 PM

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದಿಂದಲೂ ಮಾಹಿತಿ ಸಿಕ್ಕಿದ್ದು ಅದರಲ್ಲೂ ಭೂಕಂಪನವಾದ ಚಟುವಟಿಕೆ ಪತ್ತೆಯಾಗಿಲ್ಲ.

Shivamogga Blast ಶಿವಮೊಗ್ಗದ ಆಸುಪಾಸಿನಲ್ಲಿ ಭೂಕಂಪನ ದಾಖಲಾಗಿಲ್ಲ ಎಂದು ಹೇಳುತ್ತಿವೆ ವರದಿಗಳು
ಶಿವಮೊಗ್ಗದಲ್ಲಿ ಸ್ಫೋಟ
Follow us on

ಶಿವಮೊಗ್ಗ: ಶಿವಮೊಗ್ಗದ ಸ್ಫೋಟ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೆಂದ್ರಕ್ಕೆ ಮಾಹಿತಿ ನೀಡಲಾಗಿತ್ತು. ಸದ್ಯ ಶಿವಮೊಗ್ಗಕ್ಕೆ ಸಮೀಪವಿರುವ ಉಡುಪಿ ಮತ್ತು ಮಂಗಳೂರಿನ ಭೂಕಂಪ ಮಾಪನ ಕೇಂದ್ರದಿಂದ ವರದಿ ಸಿಕ್ಕಿದ್ದು, ಶಿವಮೊಗ್ಗದ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನ ಆಗಿರುವುದು ಪತ್ತೆಯಾಗಿಲ್ಲ ಎನ್ನಲಾಗಿದೆ.

ಜೊತೆಗೆ, ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದಿಂದಲೂ ಮಾಹಿತಿ ಸಿಕ್ಕಿದ್ದು ಅದರಲ್ಲೂ ಭೂಕಂಪನವಾದ ಚಟುವಟಿಕೆ ಪತ್ತೆಯಾಗಿಲ್ಲ. ಅತ್ಯಂತ ಸಣ್ಣ ಪ್ರಮಾಣದಲ್ಲಿ ಭೂಕಂಪವಾಗಿದ್ದರೆ, ಅದು ಮಾಪಕದಲ್ಲಿ ದಾಖಲಾಗದೇ ಇರುವ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Published On - 2:30 pm, Fri, 22 January 21