‘ಮತ್ತೆ ಎಲೆಕ್ಷನ್ ಬರಲ್ಲ, ಸರ್ಕಾರ ಉಳಿಸಕ್ಕೆ ಏನ್ ಬೇಕೋ ಅದನ್ನ ಮಾಡ್ತೇನೆ’
ಬಳ್ಳಾರಿ: ರಾಜ್ಯದಲ್ಲಿ ಉಪಚುನಾವಣೆ ರಂಗೇರಿದ್ದು, ಡಿ. 9ರ ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಅತಂತ್ರವಾದ್ರೆ ಚುನಾವಣೆ ಬಳಿಕ BJPಗೆ JDS ಬೆಂಬಲ ನೀಡಲ್ಲ, ಜೆಡಿಎಸ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆಯಷ್ಟೇ ಭವಿಷ್ಯ ನುಡಿದಿದ್ದರು. ಮತ್ತೆ ಸಾರ್ವತ್ರಿಕ ಚುನಾವಣೆ ಬರುವುದಿಲ್ಲ: ಇದಕ್ಕೆ ಪ್ರತ್ಯುತ್ತರವೆಂಬಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಸಾರ್ವತ್ರಿಕ ಚುನಾವಣೆ ಬರುವುದಿಲ್ಲ. ಸರ್ಕಾರ ಉಳಿಸಲಿಕ್ಕೆ ಏನು ಮಾಡಬೇಕೋ […]
ಬಳ್ಳಾರಿ: ರಾಜ್ಯದಲ್ಲಿ ಉಪಚುನಾವಣೆ ರಂಗೇರಿದ್ದು, ಡಿ. 9ರ ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಅತಂತ್ರವಾದ್ರೆ ಚುನಾವಣೆ ಬಳಿಕ BJPಗೆ JDS ಬೆಂಬಲ ನೀಡಲ್ಲ, ಜೆಡಿಎಸ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆಯಷ್ಟೇ ಭವಿಷ್ಯ ನುಡಿದಿದ್ದರು.
ಮತ್ತೆ ಸಾರ್ವತ್ರಿಕ ಚುನಾವಣೆ ಬರುವುದಿಲ್ಲ: ಇದಕ್ಕೆ ಪ್ರತ್ಯುತ್ತರವೆಂಬಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಸಾರ್ವತ್ರಿಕ ಚುನಾವಣೆ ಬರುವುದಿಲ್ಲ. ಸರ್ಕಾರ ಉಳಿಸಲಿಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಗಿಂತ ಹೆಚ್ಚಿನ ಸ್ಥಾನ ಜೆಡಿಎಸ್ಗೆ ಬರುವ ವಾತಾವರಣವಿದೆ. ರಾಜ್ಯದಲ್ಲಿ ಸರ್ಕಾರ ಮುಂದುವರಿಯುತ್ತೆ, ಯಾವ ರೀತಿ ಎಂದು ಈಗ ಹೇಳುವುದಿಲ್ಲ ಮುಂದೆ ಹೇಳುತ್ತೇನೆ ಎಂದರು.
ಯಡಿಯೂರಪ್ಪ ಭ್ರಮಾಲೋಕದಲ್ಲಿಯೇ ಇರಲಿ: ಹೊಸಪೇಟೆಯ ಕಮಲಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಘಟನೆಯೇ ಬೇರೆ, ಈಗಿನ ವಿಧಾನಸಭೆ ಉಪಚುನಾವಣೆ ಘಟನೆಯೇ ಬೇರೆ. ಆಗ ಮೋದಿ ನೋಡಿ ವೋಟು ಹಾಕಿದ್ದರು. ಇದೀಗ ಅದೇ ಜನರು ಬಿಜೆಪಿಯನ್ನ ವಿರೋಧಿಸಿದ್ದಾರೆ. ಅವರ ಭವಿಷ್ಯವೆಲ್ಲ ನಿಜವಾಗುತ್ತೆ ಎಂದುಕೊಂಡಿದ್ದಾರೆ. ಯಡಿಯೂರಪ್ಪ ಭ್ರಮಾಲೋಕದಲ್ಲಿಯೇ ಇರಲಿ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.