ಮೈಸೂರು: ಹಣಕ್ಕಾಗಿ ವ್ಯಕ್ತಿಯ ಅಪಹರಣ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ಗ್ರಾಮಾಂತರ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಜಾವೀದ್ ಖಾನ್, ಮೊಹಮ್ಮದ್ ನಜೀಬ್, ಶಾಕೀರುದ್ದೀನ್ ಬಂಧಿತರು. ಚಾಮರಾಜನಗರದ ಜಬೀಖಾನ್ ಅಪಹರಿಸಿ ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಸದ್ಯ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಘಟನೆ
ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ಜಬೀಖಾನ್ ಖಾನ್ನನ್ನು ಸಿನಿಮಾ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿ ಆರೋಪಿಗಳು 1ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬೆದರಿಕೆ ಕರೆಗೆ ಅಂಜಿದ ಪತ್ನಿ, ತನ್ನ ಗಂಡನ ಪ್ರಾಣ ಉಳಿಸಲು ಚಿನ್ನಾಭರಣ ಗಿರವಿ ಇಟ್ಟು 6.50 ಲಕ್ಷ ಹಣವನ್ನು ಕಿಡ್ನಾಪರ್ಸ್ ಗೆ ನೀಡಿದ್ದರು. ಬಳಿಕ ಮನೆಯಿಂದ ಹೊರಬಾರದಂತೆ, ಪೊಲೀಸರಿಗೆ ದೂರು ನೀಡದಂತೆ ಕಿಡ್ನಾಪರ್ಸ್ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಪೊಲೀಸರು ಸೂಕ್ಷ್ಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಎ1 ಆರೋಪಿ ಜಾವೀದ್ ಖಾನ್ ಅಪಹರಣದ ರೂವಾರಿ. ಈತ ಮಂಡ್ಯ, ಮೈಸೂರು, ಹಾಸನ, ಬೆಂಗಳೂರಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಕಿಡ್ನಾಪ್ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು ಒಂದು ಕಾರು, ರಿವಾಲ್ವರ್, ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಐವರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್; ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೇರಿ ಮೂವರು ಅರೆಸ್ಟ್