
ಹಾವೇರಿ: ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈಗ ಆ ಗುಂಡಿಗಳೇ ಆ ಬಾಲಕರ ಪಾಲಿಗೆ ಮೃತ್ಯುಕೂಪವಾಗಿದ್ದು, ಮೂರು ಜೀವವನ್ನ ಪಡೆದಿವೆ.
ಶಾಲಾ ಆವರಣದಲ್ಲಿರುವ ಗುಂಡಿಗಳಲ್ಲಿ ತುಂಬಿರೋ ನೀರು. ನೀರಿನಿಂದ ಬಾಲಕರ ಮೃತದೇಹ ಹೊರತೆಗಿತಿರೋ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು. ಗುಂಡಿಯಲ್ಲಿನ ನೀರು ಹೊರಹಾಕ್ತಿರೋ ಪುರಸಭೆ ಸಿಬ್ಬಂದಿ.
ಗುಂಡಿಯಲ್ಲಿ ಬಿದ್ದು ಮೂವರು ಬಾಲಕರು ಸಾವು!
ಆದ್ರೂ ಶಾಲೆ ಸುತ್ತಮುತ್ತಲಿನ ಬಾಲಕರು ಶಾಲಾ ಮೈದಾನದಲ್ಲಿ ನಿತ್ಯವೂ ಆಟ ಆಡುತ್ತಿದ್ರು. ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕೊಠಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿತ್ತು. ಇಲ್ಲಿ ಆಟ ಆಡೋಕೆ ಅಂತ ಆರು ಜನ ಬಾಲಕರು ಹೋಗಿದ್ದಾರೆ. ಹೀಗೆ ಆಟ ಆಡುತ್ತಾ ಆಡುತ್ತಾ ಬಾಲಕರು ಗುಂಡಿಯೊಳೆಗೆ ಬಿದ್ದಿದ್ದು, ಮೂವರು ಬಾಲಕರು ಗುಂಡಿಯಲ್ಲಿನ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಬಾಲಕರನ್ನ ಕಳೆದು ಕೊಂಡ ಕುಟಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಮೃತ ಬಾಲಕರ ಕುಟುಂಬಕ್ಕೆ ತಲಾ ಐದು ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒಟ್ನಲ್ಲಿ ಆಟ ಆಡುತ್ತಿದ್ದ ಮೂವರು ಮಕ್ಕಳು ನೀರಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದು ಮಾತ್ರ ದುರಂತ.