AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುಧ ಪೂಜೆ ಸಂಭ್ರಮ: ಬೆಳಗ್ಗಿನಿಂದಲೇ ಅರಮನೆಯಲ್ಲಿ ಪೂಜೆ, ಹೋಮ ಆರಂಭ

ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತೆ. […]

ಆಯುಧ ಪೂಜೆ ಸಂಭ್ರಮ: ಬೆಳಗ್ಗಿನಿಂದಲೇ ಅರಮನೆಯಲ್ಲಿ ಪೂಜೆ, ಹೋಮ ಆರಂಭ
ಆಯೇಷಾ ಬಾನು
|

Updated on:Oct 25, 2020 | 7:06 AM

Share

ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ.

ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತೆ. ಬೆಳಗ್ಗೆ 7.20ಕ್ಕೆ ಮತ್ತೆ ಆಯುಧಗಳು ಅರಮನೆಗೆ ರವಾನೆ.

ಬಳಿಕ ಬೆಳಗ್ಗೆ 9.15ಕ್ಕೆ ಚಂಡಿ ಹೋಮದ ಪೂರ್ಣ ಆಹುತಿ. ಬೆಳಗ್ಗೆ 10.15ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಬರುತ್ತವೆ. ಬೆಳಗ್ಗೆ 10.50ಕ್ಕೆ ಕಾರು, ಪಲ್ಲಕ್ಕಿ ಸೇರಿ ಎಲ್ಲದಕ್ಕೂ ಯದುವೀರ ಕೃಷ್ಣದತ್ತ ಒಡೆಯರ್ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಸಂಜೆ ಎಂದಿನಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತೆ. ನಂತರ ಸಿಂಹಾಸನದ ಸಿಂಹ ವಿಸರ್ಜನೆ, ಬಳಿಕ ಅರಮನೆಯ ದೇವರ ಮನೆಯಲ್ಲಿ ಯದುವೀರ್ ಕಂಕಣ ವಿಸರ್ಜನೆ ಮಾಡುತ್ತಾರೆ. ಪೂಜೆಯೊಂದಿಗೆ ಆಯುಧ ಪೂಜಾ ಕಾರ್ಯಕ್ರಮ ಸಮಾಪ್ತಿಯಾಗುತ್ತದೆ.

Published On - 6:46 am, Sun, 25 October 20

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು