AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಹೋಬಳಿ ಮಟ್ಟದಲ್ಲಿ ಬಡವರು ಮತ್ತು ರೈತರ ಕೈಹಿಡಿಯಲಿದೆ.. DK ರವಿ ಕನಸಿನ ಕೂಸು!

ಅದು ದಕ್ಷ ಐಎಎಸ್​ ಅಧಿಕಾರಿಯೊಬ್ಬರ ಕನಸಿನ ಯೋಜನೆ. ಬಡವರು ಮತ್ತು ರೈತರಿಗೆ ವರದಾನವಾಗಿರುವ ಆ ಯೋಜನೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇಡೀ ಜಿಲ್ಲೆಯಲ್ಲಿ ಜನರ ಮನ ಗೆದ್ದಿತ್ತು. ಈಗ ಮತ್ತೆ ಆ ಯೋಜನೆ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ.. ಇದು ನಿಜಕ್ಕೂ ಸಂತಸದ ವಿಷಯ ಕೋಲಾರದಲ್ಲಿ ಕಂದಾಯ ಅದಾಲತ್​ ಕಾರ್ಯಕ್ರಮ ಮತ್ತೆ ಜಾರಿಗೊಳ್ಳುತ್ತಿದೆ. ಹತ್ತಾರು ವರ್ಷಗಳ ಹಿಂದೆ.. ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗಿ ಹೋಗಿದ್ದ ಸಾವಿರಾರು ರೈತರ ಮುಖದಲ್ಲಿ ಆ ಯೋಜನೆ ಮಂದಹಾಸವನ್ನು ಮೂಡಿಸಿತ್ತು. […]

ಮತ್ತೆ ಹೋಬಳಿ ಮಟ್ಟದಲ್ಲಿ ಬಡವರು ಮತ್ತು ರೈತರ ಕೈಹಿಡಿಯಲಿದೆ.. DK ರವಿ ಕನಸಿನ ಕೂಸು!
ಸಾಧು ಶ್ರೀನಾಥ್​
|

Updated on:Oct 24, 2020 | 6:01 PM

Share

ಅದು ದಕ್ಷ ಐಎಎಸ್​ ಅಧಿಕಾರಿಯೊಬ್ಬರ ಕನಸಿನ ಯೋಜನೆ. ಬಡವರು ಮತ್ತು ರೈತರಿಗೆ ವರದಾನವಾಗಿರುವ ಆ ಯೋಜನೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇಡೀ ಜಿಲ್ಲೆಯಲ್ಲಿ ಜನರ ಮನ ಗೆದ್ದಿತ್ತು. ಈಗ ಮತ್ತೆ ಆ ಯೋಜನೆ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ.. ಇದು ನಿಜಕ್ಕೂ ಸಂತಸದ ವಿಷಯ

ಕೋಲಾರದಲ್ಲಿ ಕಂದಾಯ ಅದಾಲತ್​ ಕಾರ್ಯಕ್ರಮ ಮತ್ತೆ ಜಾರಿಗೊಳ್ಳುತ್ತಿದೆ. ಹತ್ತಾರು ವರ್ಷಗಳ ಹಿಂದೆ.. ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗಿ ಹೋಗಿದ್ದ ಸಾವಿರಾರು ರೈತರ ಮುಖದಲ್ಲಿ ಆ ಯೋಜನೆ ಮಂದಹಾಸವನ್ನು ಮೂಡಿಸಿತ್ತು. ರೈತರ ಭೂಮಿಗೆ ಸಂಬಂಧಿಸಿದ್ದ ಸಮಸ್ಯೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಯನ್ನು ಪರಿಹರಿಸಿಕೊಡುವ ಯೋಜನೆ. ಅದುವೇ ಕೋಲಾರದ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಕನಸಿನ ಯೋಜನೆ.

ಕಂದಾಯ ಅದಾಲತ್​.. ಈ ಯೋಜನೆ ಮೂಲಕವೇ ಡಿ.ಕೆ. ರವಿ ಕೋಲಾರ ಜಿಲ್ಲೆಯ ಮನೆ ಮಾತಾಗಿ ಜನ-ಮನಗೆದ್ದಿದ್ದರು. ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಅಂದಿನ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿತ್ತು. ಆದ್ರೆ ಈ ಮಧ್ಯೆ ಯೋಜನೆ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು.

ಈಗ ಮತ್ತೆ ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಕಂದಾಯ ಅದಾಲತ್​ ಆರಂಭ ಮಾಡಿದ್ದು, ಮೊದಲ ಹಂತವಾಗಿ ಹೋಬಳಿ ಮಟ್ಟದಲ್ಲಿ ಈ ಯೋಜನೆ ಆರಂಭ ಮಾಡಲಾಗಿದೆ. ಸದ್ಯ ಕೊರೊನಾ ಸಂದರ್ಭದಲ್ಲಿ ಜನರು ಕಚೇರಿಗಳಿಗೆ ಅಲೆದಾಡುವುದು ಬೇಡ ಅನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ.

ಸದ್ಯ ಪಿಂಚಣಿಗೆ ಸಂಬಂಧಿಸಿದ ದೂರು ಹಾಗೂ ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ದೂರುಗಳನ್ನು ಮಾತ್ರ ಅದಾಲತ್​ನಲ್ಲಿ ಪರಿಹರಿಸಲಾಗುತ್ತಿದೆ. ಪಿಂಚಣಿಗೆ ಸಂಬಂಧಿಸಿದ ದೂರನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿದ್ರೆ ಪಹಣಿಗೆ ಸಂಬಂಧಿಸಿದ ದೂರುಗಳನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥ ಪಡಿಸಲಾಗುತ್ತಿದೆ.

ಎಲ್ಲಾ ವರ್ಗದ ಜನರಿಗೂ ಸಹಾಯಕವಾದ ಯೋಜನೆ ಇದು  ಇನ್ನು ಇಂಥ ಮಹತ್ವದ ಯೋಜನೆಯಿಂದ ಕೋಲಾರ ಜಿಲ್ಲೆಯ ರೈತರು, ಶ್ರೀಮಂತರು, ಬಡವರು ಎನ್ನದೆ ಭೂಮಿ ಉಳ್ಳವರು ಎಲ್ಲರಿಗೂ ಅನುಕೂಲವಾಗಿತ್ತು. ಸರ್ಕಾರಿ ಕಚೇರಿಗಳ ಬಳಿ ತಿಂಗಳುಗಟ್ಟಲೆ ಅಲೆದಾಡಿ, ಅಧಿಕಾರಿಗಳಿಗೆ ಕೇಳಿದಷ್ಟು ಲಂಚ ಕೊಟ್ರು ಬಗೆಯರಿಯದ ಸಮಸ್ಯೆಗಳನ್ನು ಕ್ಷಣದಲ್ಲೇ ಸಮಸ್ಯೆಗಳನ್ನು ಬಗೆಹರಿಸುವುದು ಯೋಜನೆಯ ಉದ್ದೇಶ.

ಆದ್ರೆ ಈಗ ಜಮೀನಿಗೆ ಸಂಬಂಧ ಪಟ್ಟಂತೆ ಹಲವು ವಿವಾದಗಳು ಕೋರ್ಟ್​ ತಡೆ ಇನ್ನಿತರ ಸಮಸ್ಯೆಗಳು ಇರುವ ಕಾರಣ ಈಗ ಕೇವಲ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ರೀತಿಯಲ್ಲಿ, ಜೊತೆಗೆ ಪಹಣಿಯ ತಿದ್ದುಪಡಿ ಮಾತ್ರ ಮಾಡಲಾಗುತ್ತಿದೆ.

ಯೋಜನೆ ಮೂಲಕ ಡಿಕೆ ರವಿ ಇನ್ನೂ ಜೀವಂತ ಒಟ್ಟಾರೆ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರುವ ಮೂಲಕ ಮತ್ತೆ ಅವರ ನೆನಪು ಮರುಕಳಿಸಿದೆ. ಜೊತೆಗೆ ಈ ಮಹತ್ವದ ಯೋಜನೆಯ ಮೂಲಕ ಮತ್ತಷ್ಟು ಜನ ರೈತರ, ಬಡವರ ಸಂಕಷ್ಟಗಳು ಬಗೆಹರಿದರೆ ನಿಜಕ್ಕೂ ಅದೇ ಸಂತಸದ ವಿಷಯ.. -ರಾಜೇಂದ್ರ ಸಿಂಹ

Published On - 5:59 pm, Sat, 24 October 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ