ನಮ್ಮ ಮೆಟ್ರೋಗೆ ಸೌರಶಕ್ತಿ: ವಾರ್ಷಿಕ 61 ಕೋಟಿ ರೂ. ಉಳಿತಾಯಕ್ಕೆ ಐಐಎಸ್‌ಸಿ ಶಿಫಾರಸು
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಮ್ಮ ಮೆಟ್ರೋದ ನೀಲಿ ಮಾರ್ಗವನ್ನು ಸಂಪೂರ್ಣವಾಗಿ ಸೌರಶಕ್ತಿ ವಿದ್ಯುತ್‌ನಿಂದ ನಡೆಸಲು ಶಿಫಾರಸು ಮಾಡಿದೆ. ಈ ಯೋಜನೆಯಿಂದ ವಾರ್ಷಿಕ 61 ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಮುಂದಿನ 25 ವರ್ಷಗಳಲ್ಲಿ 624 ಕೋಟಿ ರೂಪಾಯಿಯಷ್ಟು ಹಣ ಉಳಿಯಲಿದೆ. ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಇದು ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು, ಮೇ 20: ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆಯನ್ನು ಸೌರಶಕ್ತಿಯಿಂದ ನಡೆಸುವ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 53 ಕಿಲೋಮೀಟರ್ ಉದ್ದದ ನೀಲಿ ಮಾರ್ಗದ ರೈಲುಗಳನ್ನು ಸಂಪೂರ್ಣವಾಗಿ ಸೌರಶಕ್ತಿ ಬಳಸಿ ಚಲಾಯಿಸುವುದರಿಂದ ವಾರ್ಷಿಕ 61 ಕೋಟಿ ರೂಪಾಯಿ ಉಳಿತಾಯ ಮಾಡಬಹುದೆಂದು ಐಐಎಸ್‌ಸಿ ತನ್ನ ವರದಿಯಲ್ಲಿ ತಿಳಿಸಿದೆ. ಪ್ರೊಫೆಸರ್ ಆಶೀಷ್ ವರ್ಮ ನೇತೃತ್ವದಲ್ಲಿ ನಡೆದ ಈ ಅಧ್ಯಯನವು ಮೆಟ್ರೋ ನಿಲ್ದಾಣಗಳ ಮೇಲ್ಚಾವಣಿ, ಹಳಿಗಳ ಪಕ್ಕದ ಗೋಡೆಗಳು ಮತ್ತು ಡಿಪೋಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಲಹೆ ನೀಡಿದೆ.
ಮೊದಲ ಹಂತದಲ್ಲಿ 30 ನಿಲ್ದಾಣಗಳ ಮೇಲ್ಚಾವಣಿಯಲ್ಲಿ 29.75 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲು ಸುಮಾರು 48 ರಿಂದ 63 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆದರೆ, ಬಿಎಂಆರ್‌ಸಿಎಲ್ ಈ ಹೂಡಿಕೆಯನ್ನು ಕೇವಲ ಎರಡು ವರ್ಷಗಳಲ್ಲಿ ಮರುಪಾವತಿ ಮಾಡಿಕೊಳ್ಳಬಹುದು. ಮೊದಲ ವರ್ಷವೇ 36.4 ಕೋಟಿ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಸೌರ ವಿದ್ಯುತ್ ಪ್ರತಿ ಯೂನಿಟ್‌ಗೆ 1.20 ರಿಂದ 1.38 ರೂಪಾಯಿ ಆಗಲಿದ್ದು, ಇದು ಬೆಸ್ಕಾಂನ ಪ್ರಸ್ತುತ ದರಕ್ಕಿಂತ (6-7 ರೂಪಾಯಿ) ಗಮನಾರ್ಹವಾಗಿ ಕಡಿಮೆ ಇರುತ್ತದೆ. ಈ ಯೋಜನೆಯು ನಮ್ಮ ಮೆಟ್ರೋವನ್ನು ದೇಶದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿಯಾಗಿ ಚಲಿಸುವ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಲಿದೆ ಎಂದು ತಿಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
1.85 ಕೆಜಿ ಚಿನ್ನ ಬ್ಯಾಗ್ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್ನಲ್ಲಿ ಬಸ್ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ


