AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ? ಹೇಳಿ ನಿಟ್ಟುಸಿರು ಬಿಟ್ಟ  ಅಧಿಕಾರಿ

ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ? ಹೇಳಿ ನಿಟ್ಟುಸಿರು ಬಿಟ್ಟ ಅಧಿಕಾರಿ

ರಾಮು, ಆನೇಕಲ್​
| Edited By: |

Updated on: May 20, 2026 | 10:42 PM

Share

ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ (Love) ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕುಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಯುವಕನ್ನ ಕೆಳಗಿಳಿಸಲು ಹರಸಾಹಸವೇ ಪಟ್ಟರು. ಆರಂಭದಲ್ಲಿ ಎಷ್ಟು ಮನವೊಲಿಸಿದರೂ ಸಹ ಸೋಮಶೇಖರ್ ಕೆಳಗೆ ಇಳಿಯಲೇ ಇಲ್ಲ. ಅಂತಿಮವಾಗಿ ಅದ್ಹೇಗೋ ಕಸರತ್ತು ಮಾಡಿ ಮನವೊಲಿಸಿ ಸೋಮಶೇಖರ್ ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು, (ಮೇ 21): ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ (Love) ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕುಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಯುವಕನ್ನ ಕೆಳಗಿಳಿಸಲು ಹರಸಾಹಸವೇ ಪಟ್ಟರು. ಆರಂಭದಲ್ಲಿ ಎಷ್ಟು ಮನವೊಲಿಸಿದರೂ ಸಹ ಸೋಮಶೇಖರ್ ಕೆಳಗೆ ಇಳಿಯಲೇ ಇಲ್ಲ. ಅಂತಿಮವಾಗಿ ಅದ್ಹೇಗೋ ಕಸರತ್ತು ಮಾಡಿ ಮನವೊಲಿಸಿ ಸೋಮಶೇಖರ್ ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೋಮಶೇಖರ್ ಮನವೊಲಿಸಿ ಟವರ್ ಮೇಲಿಂದ ಕೆಳಗಿಳಿಸುವಷ್ಟರಲ್ಲೇ ಜನ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಇನ್ನು ಏನಂತ ಮನವೊಲಿಸಿ ಸೋಮಶೇಖರ್ ನನ್ನು ಕೆಳಗೆ ಇಳಿಸಲಾಯ್ತು? ಹೇಗೆಲ್ಲಾ ಹರಸಾಹಸಪಡಬೇಕಾಯ್ತು ಎನ್ನುವುದನ್ನು ಅಗ್ನಿ ಶಾಮಕದ ದಳ ಅಧಿಕಾರಿ ಎಳೆಎಳೆಯಾಗಿ ಹೇಳಿ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು

Follow Us
Ramu Ram
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More