AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026-27 ರ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

BCCI domestic schedule 2026-27: ಬಿಸಿಸಿಐ 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 1,788 ಪಂದ್ಯಗಳು ನಡೆಯಲಿವೆ. ಆಗಸ್ಟ್ 23, 2026 ರಂದು ದುಲೀಪ್ ಟ್ರೋಫಿಯೊಂದಿಗೆ ಸೀಸನ್ ಪ್ರಾರಂಭವಾಗಲಿದೆ. ರಣಜಿ ಟ್ರೋಫಿ ಮತ್ತು ಸಿ.ಕೆ. ನಾಯುಡು ಟ್ರೋಫಿ ಎರಡು ಹಂತಗಳಲ್ಲಿ ನಡೆಯಲಿದ್ದು, ಪುರುಷರ U23 ಮತ್ತು ವಿಜಯ್ ಟ್ರೋಫಿಗಳು ಟಿ20 ಸ್ವರೂಪಕ್ಕೆ ಬದಲಾಗಿವೆ.

2026-27 ರ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
Domestic Cricket
ಪೃಥ್ವಿಶಂಕರ
|

Updated on: May 20, 2026 | 10:49 PM

Share

ಐಪಿಎಲ್ (IPL 2026) ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಅವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡನ್ನು ಸೇರಿ ಒಟ್ಟು 1,788 ಪಂದ್ಯಗಳು ನಡೆಯಲಿವೆ. ಈ ದೇಶೀಯ ಸೀಸನ್ ಆಗಸ್ಟ್ 23, 2026 ರಂದು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ಆರು ವಲಯ ತಂಡಗಳ ನಡುವೆ ಈ ಪಂದ್ಯಾವಳಿ ಟೆಸ್ಟ್ ಮಾದರಿಯಲ್ಲಿ ನಡೆಯಲಿದೆ. ಆ ನಂತರ ಅಕ್ಟೋಬರ್ 1 ರಂದು ಇರಾನಿ ಕಪ್ ನಡೆಯಲಿದೆ. ಬಿಸಿಸಿಐ ಬಹು-ದಿನದ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಣಜಿ ಟ್ರೋಫಿ ಮತ್ತು ಕರ್ನಲ್ ಸಿ.ಕೆ. ನಾಯುಡು ಟ್ರೋಫಿಯನ್ನು ಎರಡು ಹಂತಗಳಲ್ಲಿ ಆಡಲು ನಿರ್ಧರಿಸಿದೆ. ಇದು ಆಟಗಾರರ ತಯಾರಿಗೆ ಸಮಯವನ್ನು ನೀಡುತ್ತದೆ. ರಣಜಿ ಟ್ರೋಫಿಯ ಎಲೈಟ್ ಗುಂಪು ನಾಲ್ಕು ಗುಂಪುಗಳಲ್ಲಿ ಆಡುವ 32 ತಂಡಗಳನ್ನು ಒಳಗೊಂಡಿರುತ್ತದೆ, ಪ್ಲೇಟ್ ಗುಂಪು ಆರು ತಂಡಗಳನ್ನು ಒಳಗೊಂಡಿರುತ್ತದೆ.

ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳು

ಕರ್ನಲ್ ಸಿ.ಕೆ. ನಾಯುಡು ಟ್ರೋಫಿ ಹಾಲಿ ವಿಜೇತ ತಂಡ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಅಕ್ಟೋಬರ್ 1 ರಿಂದ 4 ರವರೆಗೆ ನಡೆಯಲಿದೆ. ಇದಲ್ಲದೆ, ಪುರುಷರ U23 ರಾಜ್ಯ A ಟ್ರೋಫಿ ಮತ್ತು ವಿಜಯ್ ಟ್ರೋಫಿಯನ್ನು ಈಗ ಏಕದಿನ ಮಾದರಿಯ ಬದಲಿಗೆ ಟಿ20 ಸ್ವರೂಪದಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಕೂಚ್ ಬೆಹಾರ್ ಟ್ರೋಫಿಯ (ಎಲೈಟ್ ಗ್ರೂಪ್) ನಾಕೌಟ್ ಪಂದ್ಯಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಆಡಿಸಲಾಗುತ್ತಿದೆ. ಏತನ್ಮಧ್ಯೆ, ವಿಜಯ್ ಮರ್ಚೆಂಟ್ ಟ್ರೋಫಿ (U16) ಯನ್ನು ಮರು ನಿಗದಿಪಡಿಸಲಾಗಿದ್ದು, ಈ ಟ್ರೋಫಿ ನವೆಂಬರ್‌ನಿಂದ ಜನವರಿವರೆಗೆ ನಡೆಯಲಿದೆ.

IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ

ರಣಜಿ ಟ್ರೋಫಿಗೆ ಗುಂಪುಗಳು ಇಂತಿವೆ

  • ಎಲೈಟ್ ಎ – ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ವಿದರ್ಭ, ಬರೋಡಾ, ಉತ್ತರ ಪ್ರದೇಶ, ಪುದುಚೇರಿ, ಗೋವಾ.
  • ಎಲೈಟ್ ಬಿ – ಕರ್ನಾಟಕ, ಆಂಧ್ರ, ಸೌರಾಷ್ಟ್ರ, ಛತ್ತೀಸ್‌ಗಢ, ಹೈದರಾಬಾದ್, ತ್ರಿಪುರ, ಪಂಜಾಬ್, ಅಸ್ಸಾಂ.
  • ಎಲೈಟ್ ಸಿ – ಬಂಗಾಳ, ಜಾರ್ಖಂಡ್, ಮಹಾರಾಷ್ಟ್ರ, ಸರ್ವೀಸಸ್, ಗುಜರಾತ್, ಕೇರಳ, ದೆಹಲಿ, ಒಡಿಶಾ.
  • ಎಲೈಟ್ ಡಿ – ಉತ್ತರಾಖಂಡ, ಮುಂಬೈ, ಹರಿಯಾಣ, ರೈಲ್ವೇಸ್, ರಾಜಸ್ಥಾನ, ತಮಿಳುನಾಡು, ಹಿಮಾಚಲ ಪ್ರದೇಶ, ಚಂಡೀಗಢ.
  • ಪ್ಲೇಟ್ – ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್